

ಬೆಂಗಳೂರು: ನ್ಯಾಯಾಧೀಶರೊಬ್ಬರ ಭದ್ರತೆಗಿದ್ದ ಗನ್ಮ್ಯಾನ್ಗೆ ಸೇರಿದ್ದ ಪಿಸ್ತೂಲ್ ಹತ್ತು ಜೀವಂತ ಗುಂಡುಗಳ ಸಮೇತ ಕಳವಾಗಿದೆ. ಈ ಸಂಬಂಧ ಗನ್ಮ್ಯಾನ್ ಉಪ್ಪಾರಪೇಟೆ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.
ಇವರು ಬೆಂಗಳೂರಿನ ನ್ಯಾಯಾಧೀಶರೊಬ್ಬರ ಬಳಿ ಭದ್ರತೆ ಸಲುವಾಗಿ ನಿಯೋಜನೆಗೊಂಡಿದ್ದರು. ಕಳೆದ ಡಿ. 26ರ ಸಂಜೆ 5:30ರ ಸುಮಾರಿಗೆ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಪಿಸ್ತೂಲ್ ಕಳವಾಗಿದ್ದು, ಅದರೊಂದಿಗೆ ಹತ್ತು ಜೀವಂತ ಗುಂಡುಗಳು ಕೂಡ ಕಳ್ಳತನ ಆಗಿವೆ.
ಈ ಸಂಬಂಧ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ಗನ್ಮ್ಯಾನ್ ದೂರು ನೀಡಿದ್ದು, ಐಪಿಸಿ 379ರ ಅಡಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ದೂರಿನ ಮೇರೆಗೆ ಪೊಲೀಸರು ಕಾರ್ಯಪ್ರವೃತ್ತರಾಗಿದ್ದು, ಪಿಸ್ತೂಲ್ ಮತ್ತು ಜೀವಂತ ಗುಂಡುಗಳ ಪತ್ತೆಗಾಗಿ ಶೋಧ ನಡೆಯುತ್ತಿದೆ.