ರಸ್ತೆ ಅಭಿವೃದ್ಧಿಗೆ ಗುದ್ದಲಿಪೂಜೆ

Published on

ಸುಬ್ರಹ್ಮಣ್ಯ: ಸುಳ್ಯ, ಕಡಬ ತಾಲೂಕಿನ ಪ್ರಮುಖ ರಸ್ತೆಯಾದ ಎಲಿಮಲೆ-ಅರಂತೋಡು ರಸ್ತೆ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆಯಿಂದ 1.25 ಕೋಟಿ ರೂ. ಬಿಡುಗಡೆಯಾಗಿದೆ. ಇದರ ಕಾಮಗಾರಿಗೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಭಾನುವಾರ ಗುದ್ದಲಿಪೂಜೆ ನೆರವೇರಿಸಿದರು.

ಲೋಕೋಪಯೋಗಿ ಇಲಾಖೆಯಿಂದ ಬಿಡುಗಡೆಗೊಂಡ 8 ಕೋಟಿ ರೂ.ಯಲ್ಲಿ 1.25 ಕೋಟಿ ರೂಪಾಯಿಯನ್ನು ಈ ರಸ್ತೆಗೆ ಇರಿಸಲಾಗಿದೆ. ಈಗಾಗಲೇ ಸರ್ಕಾರಕ್ಕೆ 3ವಿಧಗಳಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿ ಪ್ರತಿಬಾರಿ ಸಚಿವರನ್ನು ಭೇಟಿಯಾಗಿ ರಸ್ತೆಗೆ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸುತ್ತಿದ್ದೇನೆ ಎಂದು ಭಾಗೀರಥಿ ಮುರುಳ್ಯ ತಿಳಿಸಿದರು.

ದೇವಚಳ್ಳ ಗ್ರಾಪಂ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು, ಪ್ರಮುಖರಾದ ಅಧ್ಯಕ್ಷ ವೆಂಕಟ್ ವಳಲಂಬೆ, ಹರೀಶ್ ಕಂಜಿಪಿಲಿ, ವೆಂಕಟ್ ದಂಬೆಕೊಡಿ, ಮುಳಿಯ ಕೇಶವ ಭಟ್, ಕೃಷ್ಣಯ್ಯ ಮೂಲೆತೋಟ, ವಿನಯ್ ಕುಮಾರ್ ಮುಳುಗಾಡು, ದಿವಾಕರ ಮುಂಡೋಡಿ, ರಾಕೇಶ್ ಮೆಟ್ಟಿನಡ್ಕ, ಧನಂಜಯ, ನವೀನ್ ಬಾಳುಗೊಡು, ಹರ್ಷಿತ್ ಕಡ್ತಲಕಜೆ, ಇಂಜಿನಿಯರ್ ಪರಮೇಶ್ವರ, ಗುತ್ತಿಗೆದಾರ ಸತೀಶ್ ಬಪ್ಪಳಿಕೆ, ಊರವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net