ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನ ಜಾತ್ರೆ

32
Published on

ಕಡಬ: ಕೊೈಲ ಗ್ರಾಮದ ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ದೇವರ ದರ್ಶನ ಬಲಿ, ಬಂಡಿರಥೋತ್ಸವ, ಬಟ್ಟಲು ಕಾಣಿಕೆ, ಸಂಜೆ ಆನೆಗುಂಡಿಯಲ್ಲಿ ಕೆರೆ ಉತ್ಸವ ಸಹಿತ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನೀರಜ್‌ಕುಮಾರ್ ರೈ ಆರುವಾರ ಬಾಳಿಕೆ, ಸದಸ್ಯರಾದ ಯತೀಶ್ ಗುಂಡಿಜೆ, ಸುನೀತ್‌ರಾಜ್ ಶೆಟ್ಟಿ ಆರುವಾರ ಬಾಳಿಕೆ, ಶ್ರೀಧರ ಪೂಜಾರಿ ತುಂಬೆತ್ತಡ್ಕ, ಸಂಜೀವ ಸುದೆಂಗಳ, ಗೋಪಾಲ ನಾಯ್ಕ ಸೀಗೆತ್ತಡಿ, ಸುಜಾತ ಜೆ.ಶೆಟ್ಟಿ ಬಡಿಲ, ಮೀನಾಕ್ಷಿ ಕೆ.ಮುಂಡೈಮಾರು, ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಯದುಶ್ರೀ ಆನೆಗುಂಡಿ, ಉತ್ಸವ ಸಮಿತಿ ಅಧ್ಯಕ್ಷ ಧರ್ಣಪ್ಪ ಗೌಡ ಕೊರಿಕ್ಕಾರು, ಉಪಾಧ್ಯಕ್ಷರಾದ ಪಾಂಡೇಲುಗುತ್ತು ಚಂದ್ರಹಾಸ ರೈ ಬುಡಲೂರು, ಶೀನಪ್ಪ ಗೌಡ ಪಲ್ಲಡ್ಕ, ರಾಜೀವ ಗೌಡ ಪೊಸಲಕ್ಕೆ, ಮೋಹನದಾಸ್ ಶೆಟ್ಟಿ ಬಡಿಲ, ಮುರಳಿಕೃಷ್ಣ ಬಡಿಲ, ಪ್ರಧಾನ ಕಾರ್ಯದರ್ಶಿ ವಿನೋದ್‌ಕುಮಾರ್ ಪಲ್ಲಡ್ಕ, ಕಾರ್ಯದರ್ಶಿಗಳಾದ ಶಾಂತರಾಮ ಗೌಡ ಬೇಂಗದಪಡ್ಪು, ದಾಮೋದರ ಪುಣ್ಕೆತ್ತಡಿ, ಜ್ಯೋತಿ ಕಲ್ಕಾಡಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಕೊರಗಪ್ಪ ಗೌಡ ಮುಂಡೈಮಾರ್, ಶ್ರೀನಿವಾಸ ಗೌಡ ಪಲ್ಲಡ್ಕಪಟ್ಟೆ, ವಿಶ್ವನಾಥ ಗೌಡ ಪುತ್ಯೆ, ರಘುನಾಥ ಶೆಟ್ಟಿ ಕಲ್ಕಾಡಿ, ಸೋಮನಾಥ ಗೌಡ ಪಲ್ಲಡ್ಕ, ಶ್ರೀರಾಮ ಕೆಮ್ಮಾರ, ವಸಂತಕುಮಾರ್ ಪೊಸಲಕ್ಕೆ, ಅಭಿವೃದ್ಧಿ ಸಮಿತಿ ಸಲಹೆಗಾರ ಕೇಶವ ಅಮೈ ಕಲಾಯಿಗುತ್ತು, ಅಧ್ಯಕ್ಷ ಶೀನಪ್ಪ ಗೌಡ ವಳಕಡಮ, ಉಪಾಧ್ಯಕ್ಷರಾದ ಜಗನ್ನಾಥ ಶೆಟ್ಟಿ ಕಾರೆಗುಡ್ಡೆ, ಭವಾನಿಶಂಕರ ಪರಂಗಾಜೆ, ರಾಮ ನಾಯ್ಕ ಏಣಿತ್ತಡ್ಕ, ಬಾಲಕೃಷ್ಣ ಗೌಡ ಬೇಂಗದಪಡ್ಪು, ಕಾರ್ಯದರ್ಶಿಗಳಾದ ಶಶಿಕುಮಾರ್ ಅಂಬಾ, ರಾಧಾಕೃಷ್ಣ ತುಂಬೆತ್ತಡ್ಕ, ಜತೆ ಕಾರ್ಯದರ್ಶಿಗಳಾದ ಆನಂದ ಎಸ್.ಟಿ.ಕೆಮ್ಮಾರ, ಉಮೇಶ್ ಗೌಡ ಸಂಕೇಶ, ಶಾಂತರಾಮ್ ಬೇಂಗದಪಡ್ಪು, ಹರೀಂದ್ರ ಊರಾಜೆ ವಳಕಡಮ, ಸಚಿನ್ ಪಲ್ಲಡ್ಕ ಪಟ್ಟೆ, ಬೈಲುವಾರು ಸಮಿತಿ ಗ್ರಾಮ ಸಂಚಾಲಕ ಭವಿತ್‌ರಾಜ್ ಪಲ್ಲಡ್ಕ, ಸಹಸಂಚಾಲಕ ಪ್ರವೀಣ್‌ರಾಜ್ ಕೊಲ್ಯ ಹಾಗೂ ಎಲ್ಲ ಉಪಸಮಿತಿಗಳ ಪದಾಧಿಕಾರಿಗಳು, ಗ್ರಾಮಸ್ಥರು, ಊರು-ಪರವೂರಿನ ಭಕ್ತರು ಪಾಲ್ಗೊಂಡಿದ್ದರು.

ದರ್ಶನ ಬಲಿ, ದೇವರ ಬಂಡಿರಥೋತ್ಸವ

ಬೆಳಗ್ಗೆ ಉತ್ಸವ ಆರಂಭಗೊಂಡು ದರ್ಶನ ಬಲಿ, ದೇವರ ಬಂಡಿರಥೋತ್ಸವ, ಬಟ್ಟಲುಕಾಣಿಕೆ, ಮಹಾಪೂಜೆ ನಡೆಯಿತು. ಸಂಜೆ ದೇವಸ್ಥಾನದಲ್ಲಿ ರಂಗಪೂಜೆ ನಡೆಯಿತು. ರಾತ್ರಿ ದೇವರ ಬಲಿ ಹೊರಟು ಉತ್ಸವ, ಆನೆಗುಂಡಿಯವರೆಗೆ ಪೇಟೆ ಸವಾರಿ, ಆನೆಗುಂಡಿಯಲ್ಲಿ ಕೆರೆ ಉತ್ಸವ, ಕಟ್ಟೆಪೂಜೆ, ಆನೆಗುಂಡಿ ಬೂಡಿನಿಂದ ದುಗಲಾಯಿ ದೈವದ ಭಂಡಾರ ತರುವ ಕಾರ್ಯಕ್ರಮ ನಡೆಯಿತು. ಕೆಮ್ಮಿಂಜೆ ನಾಗೇಶ ತಂತ್ರಿ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು. ದೇವಸ್ಥಾನದ ಪವಿತ್ರಪಾಣಿ ವೆಂಕಟ್ರಮಣ ಕುದ್ರೆತ್ತಾಯ, ಅರ್ಚಕ ವಿಷ್ಣುಮೂರ್ತಿ ಬಡೆಕ್ಕಿಲ್ಲಾಯ ಹಾಗೂ ಪುರೋಹಿತರು ಸಹಕರಿಸಿದರು. ಸಾಯಂಕಾಲ ಯಕ್ಷಗಾನ ತಾಳಮದ್ದಲೆ, ತುಳು ನಾಟಕ ಪ್ರದರ್ಶನಗೊಂಡಿರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net