

ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಮುಗ್ಧತೆ ಇರುವಲ್ಲಿ ಅನುಗ್ರಹ ಶಕ್ತಿ ನಿರಂತರವಾಗಿರುವುದಲ್ಲದೆ, ಪರಹಿತದಲ್ಲಿ ಪರಮ ಸುಖ ಅಡಕವಾಗಿರುತ್ತದೆ ಎಂದು ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಸಾಧ್ವಿ ಶ್ರೀಅಮೃತಾನಂದಮಯೀ ಹೇಳಿದರು.
ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದ ಅಷ್ಟಬಂಧ ಬ್ರಹ್ಮಕಲಶೋತ್ಸವ-ಮೂಡಪ್ಪ ಸೇವೆಯ ಅಂಗವಾಗಿ ಮಂಗಳವಾರ ಬೆಳಗ್ಗೆ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಕರ್ನಾಟಕ ಧಾರ್ಮಿಕ ಪರಿಷತ್ ಸದಸ್ಯೆ ಮಲಾರ್ಬೀಡು ಮಲ್ಲಿಕಾ ಪ್ರಶಾಂತ್ ಪಕಳ ಅಧ್ಯಕ್ಷತೆ ವಹಿಸಿದ್ದರು. ಕೇರಳ ಹಿಂದು ಐಕ್ಯವೇದಿಯ ರಕ್ಷಾಧಿಕಾರಿ, ವಾಗ್ಮಿ ಶಶಿಕಲಾ ಟೀಚರ್ ಪಟ್ಟಾಂಬಿ ಪ್ರಧಾನ ಉಪನ್ಯಾಸ ನೀಡಿದರು.
ಉಳಿಪಾಡಿಗುತ್ತು ಶಕುಂತಲಾ ಯು.ಟಿ.ಆಳ್ವ ಅವರನ್ನು ಗೌರವಿಸಲಾಯಿತು. ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ ಹರಸಿದರು. ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಕುಳೂರು ಕನ್ಯಾನ ಸದಾಶಿವ ಶೆಟ್ಟಿ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಕಾಸರಗೋಡು ಜಿ.ಪಂ. ಅಧ್ಯಕ್ಷೆ ವಕೀಲೆ ಬೇಬಿ ಬಾಲಕೃಷ್ಣನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮಧೂರು ಗ್ರಾ.ಪಂ. ಉಪಾಧ್ಯಕ್ಷೆ ಸ್ಮಿಜ, ಸದಸ್ಯೆಯರಾದ ರಾಧಾ ಕೆ, ಜನನಿ ಟಿ.ಕೆ, ಸೌಮ್ಯಾ ದಿನೇಶ, ಶ್ರೀಮತಿ ಟೀಚರ್, ಅಂಬಿಳಿಸಿ ಎಂ, ಉಷಾ ಸುರೇಶ್, ಸ್ಮಿತಾ ಸುಧಾಕರನ್, ವೈದ್ಯೆಯರಾದ ವೀಣಾಮಂಜುನಾಥ್ ಕಾಸರಗೋಡು, ರಮ್ಯಾ ಎಸ್.ಉಳಿಯತ್ತಡ್ಕ, ಲೀಲಾವತಿ ವಿಶ್ವನಾಥ ರೈ ಮಾಯಿಪ್ಪಾಡಿ, ಉದ್ಯಮಿ ಬಿಂದು ದಾಸ್, ಮೀರಾ ಕಾಮತ್, ಮಮತಾ ಶೆಟ್ಟಿ ಉಪಸ್ಥಿತರಿದ್ದರು.
ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಹಾಗೂ ತುಳು ಚಲನಚಿತ್ರ ನಟ, ರಂಗಕರ್ಮಿ ಅರವಿಂದ ಬೋಳಾರ್ ಉಪಸ್ಥಿತರಿದ್ದು ಶುಭಹಾರೈಸಿದರು. ಮಹಿಳಾ ಸಮಿತಿ ಅಧ್ಯಕ್ಷೆ ಸವಿತಾ ಟೀಚರ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸೌಮ್ಯಾ ಶ್ರೀಕಾಂತ್ ಮಧೂರು ಹಾಗೂ ಮೀರಾ ಆಳ್ವ ನಿರೂಪಿಸಿದರು. ಸಂಚಾಲಕಿ ಶೋಭಾ ಗಟ್ಟಿ ವಂದಿಸಿದರು.
ತ್ರಿಗುಣಗಳನ್ನು ಮೇಳೈಸಿರುವ ಮಾತೃಶಕ್ತಿ ಭಾರತೀಯ ಸಂಸ್ಕೃತಿ ಸಂವರ್ಧನೆಗೆ ಚಾಲಕ ಶಕ್ತಿಯಾಗಿದೆ. ಭಾರತದ ಶಕ್ತಿ ಇಲ್ಲಿಯ ಆಧ್ಯಾತ್ಮಿಕ ಸಾನ್ನಿಧ್ಯಗಳಾಗಿದ್ದು, ಪ್ರತಿ ಊರಿಗೂ ಅಲ್ಲಿಯ ಆರಾಧನಾಲಯಗಳು ಶೃಂಗಾರವಾಗಿದೆ. ಮಧುವಾಹಿನಿ ತಟದ ಮಧೂರು ಸನ್ನಿಧಿಯೆಂಬ ಪುಷ್ಪಕ್ಕೆ ಭಕ್ತರೆಂಬ ಪತಂಗಗಳು ಮುತ್ತಿ ನಡೆಯುತ್ತಿರುವ ಕರಾವಳಿಯ ಈ ಮಹಾಕುಂಭ ನವ ಚೇತನವನ್ನು ಮೂಡಿಸಿದೆ. ಮಹಾಗಣಪತಿಯ ನಿಗ್ರಹಾನುಗ್ರಹ ಶಕ್ತಿ ನಮ್ಮೆಲ್ಲರನ್ನೂ ಸಂರಕ್ಷಿಸಲಿ. ಸಾಧ್ವಿ ಶ್ರೀಅಮೃತಾನಂದಮಯೀ ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನ https://www.vijayavani.net/summer-camp-3 https://www.vijayavani.net/ramadan-at-nelyadi-mosque