

ಬೈಂದೂರು: ನಾಯ್ಕನಕಟ್ಟೆ ಜಿಎಸ್‌ಬಿ ಸಮಾಜದ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಟ್ರಸ್ಟ್ ಅಧ್ಯಕ್ಷ ಉಪ್ರಳ್ಳಿ ನಾರಾಯಣ ಶ್ಯಾನುಭಾಗ್ ಅಧ್ಯಕ್ಷತೆಯಲ್ಲಿ ವಾರ್ಷಿಕ ಮಹಾಸಭೆ ನಡೆಯಿತು.
ಹಿರಿಯರಾದ ಲಕ್ಷ್ಮೀನಾರಾಯಣ ಪ್ರಭು ಮಾತನಾಡಿದರು. ಕಾರ್ಯದರ್ಶಿ ಶ್ರೀಶ ಭಟ್ ಆಯವ್ಯಯ ಮಂಡಿಸಿದರು. ವರಮಹಾಲಕ್ಷ್ಮೀ ಸೇವಾ ಸಮಿತಿ ಲೆಕ್ಕಪತ್ರಗಳನ್ನು ಸಮಿತಿ ಉಪಾಧ್ಯಕ್ಷೆ ವಿದ್ಯಾ ಯು.ಭಟ್ ಓದಿದರು. ಉಪಸಮಿತಿ ಕಾರ್ಯದರ್ಶಿ ಗಣೇಶ್ ರಾಯ್ ಪ್ರಭು ವಿದ್ಯಾರ್ಥಿವೇತನದ ವಿವರ ನೀಡಿದರು. ಎಸ್‌ಎಸ್‌ಎಲ್‌ಸಿಯಿಂದ ಪದವಿ ಶಿಕ್ಷಣದ ತನಕ ಹಾಗೂ ತಾಂತ್ರಿಕ ಶಿಕ್ಷಣ ಓದುತ್ತಿರುವ ಸಮಾಜದ 23 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.
ಖಂಬದಕೋಣೆ ರೈತರ ಸಹಕಾರಿ ಸಂಘ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಷ್ಣು ಆರ್.ಪೈ, ದಾನಿ ಕೆ.ವಿ.ಶ್ಯಾನುಭಾಗ್ ಕೊಡೇರಿ, ವರಮಹಾಲಕ್ಷ್ಮೀ ಸಮಿತಿ ಅಧ್ಯಕ್ಷೆ ಶ್ರೀಮತಿ ನಾರಾಯಣ ಶ್ಯಾನುಭಾಗ್, ಟ್ರಸ್ಟ್ ಉಪ ಕಾರ್ಯದರ್ಶಿ ಗಣೇಶ್ ಪೈ, ಅರ್ಚಕ ಬಾಲಕೃಷ್ಣ ಭಟ್ ಉಪಸ್ಥಿತರಿದ್ದರು. ಶ್ರೀಶ ಭಟ್ ವಂದಿಸಿದರು.