

ಕೋಟ: ಕೋಡಿ ಗ್ರಾಮ ಪಂಚಾಯಿತಿ ನೇತೃತ್ವದಲ್ಲಿ ಪಂಚವರ್ಣ ಸಂಸ್ಥೆ, ಮಣೂರು ಗೀತಾನಂದ ಫೌಂಡೇಶನ್ ಸಂಯೋಜನೆಯೊಂದಿಗೆ, ಬ್ರಹ್ಮಾವರ ಶಿಶು ಅಭಿವೃದ್ಧಿ ಯೋಜನೆ, ಸಮನ್ವಯ ಸಂಜೀವಿನಿ ಒಕ್ಕೂಟ ಕೋಡಿ ಹಾಗೂ ಎಸ್‌ಎಲ್‌ಆರ್‌ಎಂ ಟಕದ ಸಹಯೋಗದೊಂದಿಗೆ ಪರಿಸರ ಸ್ನೇಹಿ ಹಸಿರು ಜೀವ ಅಭಿಯಾನ ಕೋಡಿ ಕನ್ಯಾಣದಲ್ಲಿ ನಡೆಯಿತು.
ಗ್ರಾಪಂ ಅಧ್ಯಕ್ಷೆ ಗೀತಾ ಖಾರ್ವಿ, ಸದಸ್ಯರಾದ ಪ್ರಭಾಕರ್ ಮೆಂಡನ್ ಮತ್ತು ಕೃಷ್ಣ ಪೂಜಾರಿ ಮನೆ ಮನೆಗೆ ತೆರಳಿ ಪರಿಸರ ಜಾಗೃತಿ ಮೂಡಿಸಿದರು.
ಕೋಡಿ ಕನ್ಯಾಣ ಅಂಗನವಾಡಿ ಕಾರ್ಯಕರ್ತೆ ಪ್ರೀತಿ ಎಸ್. ಹಾಗೂ ಸಹಾಯಕಿ ಸಂಗೀತಾ, ಸೌಮ್ಯಾ ಕೃಷ್ಣಮೂರ್ತಿ ಗಿಡ ನೆಡುವ ಮೂಲಕ ಚಾಲನೆ ನೀಡಿದರು. ಗ್ರಾಪಂ ಸದಸ್ಯೆ ಸರಸ್ವತಿ, ಕೋಡಿ ಅಂಗನವಾಡಿ ಕಾರ್ಯಕರ್ತೆ ಲೀಲಾವತಿ ಪಿ., ಹೊಸಬೆಂಗ್ರೆ ಅಂಗನವಾಡಿ ಕಾರ್ಯಕರ್ತೆ ಯಮುನಾ ಲಕ್ಷ್ಮಣ್ ಕುಂದರ್, ಸಂಜೀವಿನಿ ಅಧ್ಯಕ್ಷೆ ಪೂರ್ಣಿಮಾ, ಎಸ್‌ಎಲ್‌ಆರ್‌ಎಂ ಟಕ ಸಿಬ್ಬಂದಿ ಕಿರಣ್ ಪುತ್ರನ್ ಹಾಗೂ ಸ್ಥಳೀಯರಾದ ರಾಜು ಬಂಗೇರ, ರಾಧಾ ಸರೋಜ, ವೇದಾ, ಕುಸುಮಾ, ಪೂಜಿತ್ ಮತ್ತಿತರರು ಉಪಸ್ಥಿತರಿದ್ದರು.