ಕೋಟ: ಸಂಟನೆ ಮತ್ತು ನಿರಂತರತೆ ಎರಡೂ ಸುಲಭದ್ದಲ್ಲ. ಎಪ್ಪತ್ತರ ದಶಕದಲ್ಲಿ ಸಾಲಿಗ್ರಾಮ ಮಕ್ಕಳ ಮೇಳವನ್ನು ಕಟ್ಟಿ, ಸುವಾರು ಐವತ್ತು ವರ್ಷಗಳ ಸಾರ್ಥಕ ದಿಗ್ವಿಜಯವನ್ನು ಸಾಧಿಸಿದ ಶ್ರೀನಿವಾಸ ಉಡುಪ ಮತ್ತು ಶ್ರೀಧರ ಹಂದೆಯವರು ಯಕ್ಷಯುಗ ಪ್ರವರ್ತಕರು. ಮುಗ್ಧ ಮನಸ್ಸಿನ ಮಕ್ಕಳಲ್ಲಿ ಪರಂಪರೆಯ ಯಕ್ಷಗಾನದ ಅಭಿರುಚಿಯನ್ನು ಮೂಡಿಸಿ, ಯಕ್ಷಗಾನ ಪ್ರೇಕ್ಷಕರ ಸಹೃದಯತೆಯನ್ನು ತಿದ್ದಿದ ಮಕ್ಕಳ ಮೇಳ ಐತಿಹಾಸಿಕ ದಾಖಲೆ ಮೆರೆದಿದೆ ಎಂದು ಯಕ್ಷಗಾನ ಸಂಶೋಧಕ, ವಿದ್ವಾಂಸ ಆನಂದರಾಮ ಉಪಾಧ್ಯ ಹೇಳಿದರು.
ಮಂಗಳೂರಿನ ಕರ್ನಾಟಕ ಯಕ್ಷಧಾಮ, ಬೆಂಗಳೂರು ಪದ್ಮ ಕಮಲ ಟ್ರಸ್ಟ್, ಕಲ್ಕೂರ ಪ್ರತಿಷ್ಠಾನದ ಸಹಯೋಗದೊಂದಿಗೆ ಬೆಂಗಳೂರಿನ ಪರಂಪರಾ ಸಭಾಂಗಣದಲ್ಲಿ ಆಯೋಜಿಸಿದ ಕೋಟದ ಸಾಲಿಗ್ರಾಮ ಮಕ್ಕಳ ಮೇಳ ಸುವರ್ಣ ಪರ್ವ ಸರಣಿ ಕಾರ್ಯಕ್ರಮ ಸುವರ್ಣ ಸಂವಾನ ಯಕ್ಷಗಾನ ಪ್ರದರ್ಶನದಲ್ಲಿ ಮಾತನಾಡಿದರು.
ಸಾಲಿಗ್ರಾಮ ಮಕ್ಕಳ ಮೇಳದ ಉಪಾಧ್ಯಕ್ಷ ಎಚ್.ಜನಾರ್ದನ ಹಂದೆ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳ ಯಕ್ಷಗಾನ ಕ್ಷೇತ್ರದ ಗುರುಗಳಾಗಿ ಕಾರ್ಯನಿರ್ವಹಿಸುತ್ತಿರುವ ಕೆ.ಮೋಹನ್, ಶ್ರೀನಿವಾಸ ಸಾಸ್ತಾನ, ಕೃಷ್ಣಮೂರ್ತಿ ತುಂಗ, ಡಾ.ಬೇಗಾರು ಶಿವಕುವಾರ್, ಡಾ.ರಾಧಾಕೃಷ್ಣ ಉರಾಳ, ಶಂಕರ ಬಾಳ್ಕುದ್ರು ಅವರನ್ನು ಗೌರವಿಸಲಾಯಿತು.
ಕಲಾವಿದರಾದ ಗಣೇಶ್ ಶಾನುಭಾಗ್, ರಾಮದೇವ ಉರಾಳ, ವೆಂಕಟೇಶ ಹಂದೆ, ಕೃಷ್ಣಾನಂದ ಆಚಾರ್, ಮುರಳೀಧರ ನಾವುಡ, ವಿಶ್ವನಾಥ ಉರಾಳ, ಕಲಾ ಪೋಷಕರಾದ ಎಂ.ಸುಧೀಂದ್ರ ಹೊಳ್ಳ ಉಪಸ್ಥಿತರಿದ್ದರು. ಸುಜಯೀಂದ್ರ ಹಂದೆ ಸ್ವಾಗತಿಸಿದರು. ಪ್ರದೀಪ ಮಧ್ಯಸ್ಥ ವಂದಿಸಿದರು. ವಾಧುರಿ ಶ್ರೀರಾಮ ನಿರೂಪಿಸಿದರು.