

ಬಾಗಲಕೋಟೆ: ತೇರದಾಳ ತಾಲೂಕಿನ ಸಸಾಲಟ್ಟಿ ಗ್ರಾಮದಲ್ಲಿ ರಾತ್ರೋರಾತ್ರಿ ಕಿಡಿಗೇಡಿಗಳು ವಾಮಾಚಾರ ಮಾಡಿದ್ದು, ಇದನ್ನ ಕಂಡ ಗ್ರಾಮಸ್ಥರು ಬೆಳ್ಳಂಬೆಳಗ್ಗೆ ಬೆಚ್ಚಿಬಿದ್ದಿದ್ದಾರೆ.
ಸಸಾಲಟ್ಟಿ ತೋಟ-2ರ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ಕುಂಬಳಕಾಯಿ, ಇಂಗಳಮುಳ್ಳು, ಬಣ್ಣ, ಗೊಂಬೆ, ನಿಂಬೆಹಣ್ಣು ಇಟ್ಟು ವಾಮಾಚಾರ ಮಾಡಲಾಗಿದೆ. ಇದೇ ರೀತಿ ಗ್ರಾಮದಲ್ಲಿ ಮೂರು ದಾರಿ ಕೂಡುವ ಜಾಗ ಎಂದರೆ ತೇರದಾಳ-ಹಿಡಕಲ್ ರಸ್ತೆಯಲ್ಲಿ ಮೂರು ರಸ್ತೆಗಳು ಸೇರುವ ಜಾಗದಲ್ಲೂ ಮಾಡಿದ್ದಾರೆ. ಇದನ್ನೂ ಓದಿರಿ ತುಮಕೂರಲ್ಲಿ ದೇವೇಗೌಡ ಸೋತಿದ್ದು ಏಕೆ ಗೊತ್ತಾ? ಜೆಡಿಎಸ್ ಶಾಸಕರೇ ಬಿಚ್ಚಿಟ್ಟ ಸತ್ಯ ಇದು…
ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ವಾಮಾಚಾರ ಮಾಡಲಾಗಿದೆ ಎಂದು ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದಾರೆ. ಸಸಾಲಟ್ಟಿ ಪಂಚಾಯಿತಿಗೆ ಡಿ.22ರಂದು ಚುನಾವಣೆ ನಡೆಯಲಿದೆ. ಈ ಪಂಚಾಯಿತಿಯಲ್ಲಿ 6 ವಾರ್ಡಿನ 21 ಸ್ಥಾನಕ್ಕೆ 62 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಜಿದ್ದಾಜಿದ್ದಿನ ಕಣವಾಗಿರುವ ಸಸಾಲಟ್ಟಿಯಲ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಮತಗಟ್ಟೆ 48, 50 ರ ಮುಂಭಾಗ ವಾಮಾಚಾರದ ಕುರುಹು ಪತ್ತೆಯಾಗಿದೆ.