More

    ತುಮಕೂರಲ್ಲಿ ದೇವೇಗೌಡ ಸೋತಿದ್ದು ಏಕೆ ಗೊತ್ತಾ? ಜೆಡಿಎಸ್​ ಶಾಸಕರೇ ಬಿಚ್ಚಿಟ್ಟ ಸತ್ಯ ಇದು…

    ತುಮಕೂರು: ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್​ ಭದ್ರಕೋಟೆಯಂತಿದ್ದ ತಮಕೂರಿನಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಹೀನಾಯವಾಗಿ ಸೋತರು. ಇದು ಪಕ್ಷಕ್ಕೆ ಮಾತ್ರವಲ್ಲ, ವರಿಷ್ಠರಿಗೂ ಆಘಾತ ನೀಡಿತು. ದೊಡ್ಡಗೌಡರ ಸೋಲಿಗೆ ಕಾರಣ ಏನು ಸ್ವತಃ ಜೆಡಿಎಸ್​ ಶಾಸಕರೇ ಬಾಯ್ಬಿಟ್ಟಿದ್ದಾರೆ.

    ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ ಮನೆಯಲ್ಲಿ ಭಾನುವಾರ ಏರ್ಪಡಿಸಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗುಬ್ಬಿ ಕ್ಷೇತ್ರದ ಜೆಡಿಎಸ್​ ಶಾಸಕ ಎಸ್.ಆರ್.ಶ್ರೀನಿವಾಸ್, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಬಾದಾಮಿ ಮತ್ತು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿಸಲು ಬಿಜೆಪಿ ಮತ್ತು ಜೆಡಿಎಸ್ ನಡುವೆ ಒಳ ಒಪ್ಪಂದ ಆಗಿತ್ತು. ಆದರೆ, ತುಮಕೂರಿನಲ್ಲಿ ದೇವೇಗೌಡರನ್ನು ಸೋಲಿಸಲು ಯಾರಿಂದಲೂ ಯಾವುದೇ ಒಳ ಒಪ್ಪಂದ ಆಗಿರಲಿಲ್ಲ. ಆದರೆ ದೇವೇಗೌಡರಿಗೆ ತುಮಕೂರಿನ ಮೇಲಿದ್ದ ಅತಿಯಾದ ವಿಶ್ವಾಸವೇ ಅವರ ಸೋಲಿಗೆ ಕಾರಣ ಆಯ್ತು ಎಂದರು. ಇದನ್ನೂ ಓದಿರಿ ನಾನು ಇಷ್ಟೊಂದು ಕೆಟ್ಟದ್ದಾಗಿ ಸೋಲ್ತೀನಿ ಅಂತ ಭಾವಿಸಿರಲಿಲ್ಲ… ಎನ್ನುತ್ತಲೇ ಭಾವುಕರಾದ ಸಿದ್ದು

    ಈಗಾಗಲೇ ಕಾಂಗ್ರೆಸ್​ ಸೇರಲು ಜೆಡಿಎಸ್​ ಮನೆಯಿಂದ ಒಂದು ಹೊರ ಇಟ್ಟಿರುವ ಶಾಸಕ ಶ್ರೀನಿವಾಸ್, ನಾನು ಈಗಲೂ ಜೆಡಿಎಸ್ ನಲ್ಲಿದ್ದೇನೆ. ಆದರೆ, ಎರಡೂವರೆ ವರ್ಷದವರೆಗೆ ನಿರ್ಲಿಪ್ತರಾಗಿದ್ದು, ಆ ನಂತರ ಕಾರ್ಯಕರ್ತರ ಜತೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುವೆ ಎಂದರು.

    ತುಮಕೂರಲ್ಲಿ ದೇವೇಗೌಡ ಸೋತಿದ್ದು ಏಕೆ ಗೊತ್ತಾ? ಜೆಡಿಎಸ್​ ಶಾಸಕರೇ ಬಿಚ್ಚಿಟ್ಟ ಸತ್ಯ ಇದು...ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಮಧ್ಯಂತರ ಚುನಾವಣೆ ನಡೆಯುವುದಿಲ್ಲ. ನಮ್ಮ ನಾಯಕರು ಅವರಿಗೆ ಬೆಂಬಲವಾಗಿ ನಿಂತಿದ್ದಾರೆ ಎಂದ ಶ್ರೀನಿವಾಸ್, ಜೆಡಿಎಸ್ ಹುಟ್ಟಿರುವುದೇ ಜಗಳದಿಂದ. ಅದಕ್ಕಾಗಿ ಪಕ್ಷದಲ್ಲಿ ಜಗಳ ಸಾಮಾನ್ಯ. ನಮಗೆ ದೇವೇಗೌಡರೇ ನಾಯಕರು ಎಂದರು.

    ಕೆ.ಎನ್​.ರಾಜಣ್ಣ ಮಾತನಾಡಿ, ದೇವೇಗೌಡರ ಋಣ ತೀರಿಸುವ ಆಸೆ ಇತ್ತು. ಈ ಹಿಂದೆ ಒಮ್ಮೆ ಅವರು ನನ್ನನ್ನು ಶಾಸಕರನ್ನಾಗಿ ಮಾಡಿದ್ದರು. ಅವರು ನನ್ನ ಜತೆ ಬಾ ಅಂತ ಕರೀಲಿಲ್ಲ. ಬಸವರಾಜು ಅವರನ್ನು ಬಿಜೆಪಿ ಅಂತ ಬೆಂಬಲಿಸಲಿಲ್ಲ, ವ್ಯಕ್ತಿಗತವಾಗಿ ಬೆಂಬಲಿಸಿದೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿರಿ ಕೊಡವರ ಸಿಟ್ಟಿಗೆ ಬೆಚ್ಚಿದ ಸಿದ್ದರಾಮಯ್ಯ ಕೊನೆಗೂ ಕ್ಷಮೆ ಕೇಳಿದ್ರು…

    ನಮ್ಮ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬರುವರು ಇದ್ದಾರೆ. ಅದೇರೀತಿ ಕಾಂಗ್ರೆಸ್ ಬಿಡುವರೂ ಎಂದ ರಾಜಣ್ಣ, ಡಿಕೆಶಿ ಮತ್ತು ಸಿದ್ದರಾಮಯ್ಯ ಕಾಂಗ್ರೆಸ್ ಶಕ್ತಿ. ಅವರ ನೇತೃತ್ವದಲ್ಲಿ 2023ರಲ್ಲಿ ಕಾಂಗ್ರೆಸ್ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಒಳಸಂಚು ಮಾಡುವುದರಲ್ಲಿ ಕುಮಾರಸ್ವಾಮಿ ಎತ್ತಿದ ಕೈ. ನಂ.1 ಒಳ ಒಪ್ಪಂದದ ಪ್ರಿನ್ಸಿಪಾಲ್ ಎಚ್​ಡಿಕೆ ಎಂದು ವಾಗ್ದಾಳಿ ನಡೆಸಿದ ರಾಜಣ್ಣ, ಚಾಮುಂಡೇಶ್ಚರಿ ಕ್ಷೇತ್ರದಲ್ಲಿ ಗೋಪಾಲಯ್ಯ ಅನ್ನುವನಿಗೆ ಬಿಜೆಪಿಯಿಂದ ಟಿಕೆಟ್ ಕೊಡಿಸಿದ್ದು ಯಾರು? ಅಂತ ಹೇಳಲಿ ಎಂದು ಸವಾಲು ಹಾಕಿದರು.

    ಜೆಡಿಎಸ್​ ತೊರೆಯಲಿದ್ದಾರೆ ಹಲವು ಶಾಸಕರು… ತಲ್ಲಣ ಮೂಡಿಸಿದೆ ಈ ಹೇಳಿಕೆ

    ಜೆಡಿಎಸ್​ ಮನೆಗೆ ಬಂದ ಸಿ.ಎಂ.ಇಬ್ರಾಹಿಂ! ನಾನು ಮತ್ತು ದೇವೇಗೌಡರು ತಂದೆ-ಮಗ ಇದ್ದಂತೆ…

    ನಾನು ತುಂಬಾ ತಪ್ಪು ಮಾಡುತ್ತಿರುವೆ, ನೀವೆಲ್ಲರೂ ಬಂದು ನನ್ನ ಶವದ ಮೇಲೆ ಮಣ್ಣು ಹಾಕಿ… ಇದೇ ನನ್ನ ಕೋರಿಕೆ

    ಪತ್ನಿ ಊರಿಗೆ ಹೋದಳೆಂದು ಸ್ನೇಹಿತೆಯನ್ನ ಮನೆಗೆ ಕರೆಸಿಕೊಂಡ ಟೆಕ್ಕಿಗೆ ಕಾದಿತ್ತು ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts