More

    ಕೊಡವರ ಸಿಟ್ಟಿಗೆ ಬೆಚ್ಚಿದ ಸಿದ್ದರಾಮಯ್ಯ ಕೊನೆಗೂ ಕ್ಷಮೆ ಕೇಳಿದ್ರು…

    ಬೆಂಗಳೂರು: ಗೋಮಾಂಸ ಸೇವನೆ ಕುರಿತು ವಿವಾದಾತ್ಮಕ ಹೇಳಿಕೆ ಕೊಡವರ ಕೆಂಗಣ್ಣಿಗೆ ಗುರಿಯಾಗಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಕೊನೆಗೂ ಕ್ಷಮೆ ಕೇಳಿದ್ದಾರೆ.

    ‘ಕೊಡವರೂ ಕೂಡ ಗೋಮಾಂಸ ತಿನ್ನುತ್ತಾರೆ’ ಎಂದಿದ್ದ ಸಿದ್ದರಾಮಯ್ಯ ವಿರುದ್ಧ ಕೊಡವರು ಸಿಡಿದೆದ್ದಿದ್ದರು. ಕೊಡವರು ಗೋವನ್ನು ಪೂಜ್ಯನೀಯ ದೃಷ್ಟಿಯಿಂದ ಕಾಣುತ್ತಾರೆ. ಅಲ್ಲದೆ ಕೊಡಗಿನಲ್ಲಿ ಗೋಹತ್ಯೆ, ಗೋಮಾಂಸ ಭಕ್ಷಣೆ ನಿಷೇಧವಿದೆ. ಬ್ರಿಟಿಷರ ಕಾಲದಿಂದಲೂ ಈ ನಿಯಮ ಜಾರಿಯಲ್ಲಿದೆ. ಹೀಗಿರುವಾಗ ಕೊಡವರು ಗೋಮಾಂಸ ತಿನ್ನುತ್ತಾರೆ ಅನ್ನೋದು ತಪ್ಪು. ಮಾಜಿ ಸಿಎಂ ಸಿದ್ದರಾಮಯ್ಯ ತನ್ನ ಹೇಳಿಕೆಯನ್ನ ಹಿಂಪಡೆಯುವ ಮೂಲಕ ಕೊಡವರ ಕ್ಷಮೆ ಕೋರಬೇಕು. ಇಲ್ಲವಾದಲ್ಲಿ ತಕ್ಕಪಾಠ ಕಲಿಸಬೇಕಾಗುತ್ತದೆ ಎಂದು ಕಾವೇರಿ ಸೇನೆ ಸಂಚಾಲಕ ರವಿ ಚಂಗಪ್ಪ ಎಚ್ಚರಿಸಿದ್ದರು. ಮಡಿಕೇರಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಕೂಡ, ‘ಸಿದ್ದರಾಮಯ್ಯ ತಿನ್ನುತ್ತಿರುತ್ತಾರೆ, ಅದಕ್ಕೆ ಆ ರೀತಿ ಹೇಳಿದ್ದಾರೆ. ನಾವು ಗೋವನ್ನು ಪೂಜಿಸುವವರು’ ಎಂದು ಕಿಡಿಕಾರಿದ್ದರು. ಇದನ್ನೂ ಓದಿರಿ ನಾನು ಇಷ್ಟೊಂದು ಕೆಟ್ಟದ್ದಾಗಿ ಸೋಲ್ತೀನಿ ಅಂತ ಭಾವಿಸಿರಲಿಲ್ಲ… ಎನ್ನುತ್ತಲೇ ಭಾವುಕರಾದ ಸಿದ್ದು

    ಅಲ್ಲದೆ ಸಿದ್ದರಾಮಯ್ಯರ ವಿವಾದಾತ್ಮಕ ಹೇಳಿಕೆ ಕುರಿತು ಸಂಸದ ಪ್ರತಾಪ್ ಸಿಂಹ, ‘ಸಿದ್ದರಾಮಯ್ಯಗೆ ಕೋಳಿ, ಕುರಿ, ಗೋವಿಗೆ ಇರುವ ವ್ಯತ್ಯಾಸವೂ ಗೊತ್ತಿಲ್ಲ’ ಎಂದು ಹರಿಹಾಯ್ದಿದ್ದರು. ‘ನಿಮ್ಮ ಕುಲದೈವ ಬೀರೇಶ್ವರ ಸ್ವಾಮಿ ಗೋಹತ್ಯೆ ಸಮರ್ಥನೆಗೆ ನಿಂತುಕೊಳ್ತಾರಾ?’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ತರಾಟೆಗೆ ತೆಗೆದುಕೊಂಡಿದ್ದರು.

    ಹೀಗೆ ಸಿದ್ದು ಹೇಳಿಕೆ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ಸಿದ್ದರಾಮಯ್ಯ, ‘ಕೊಡವರೂ ಬೀಪ್ ತಿನ್ನುತ್ತಾರೆ ಎಂಬ ನನ್ನ ಹೇಳಿಕೆ ತಪ್ಪುಗ್ರಹಿಕೆಯಿಂದ ಮಾಧ್ಯಮಗಳಲ್ಲಿ ವರದಿಯಾಗಿದೆ. ಇದರಿಂದ ಕೊಡವ ಸಮುದಾಯಕ್ಕೆ ನೋವಾಗಿದ್ದರೆ ಈ ಬಗ್ಗೆ ನಾನು ವಿಷಾದಿಸುತ್ತೇನೆ. ನನ್ನ ನೆರೆಯ ಜಿಲ್ಲೆಯಾದ ಕೊಡಗಿನ ಸಂಸ್ಕೃತಿ ಬಗ್ಗೆ ನನಗೆ ಅರಿವಿದೆ, ವಿಶೇಷವಾದ ಗೌರವವೂ ಇದೆ’ ಎಂದು ಟ್ವೀಟ್​ ಮೂಲಕ ಕ್ಷಮೆ ಕೋರಿದ್ದಾರೆ.

    ನೀವು ಕಾಂಗ್ರೆಸ್​ ಬಿಡೋದು ಯಾವಾಗ? ನಾನು ಕಾತರದಿಂದ ಕಾಯುತ್ತಿರುವೆ… ಎಂದ ಎಚ್​ಡಿಕೆ

    ಪತ್ನಿ ಊರಿಗೆ ಹೋದಳೆಂದು ಸ್ನೇಹಿತೆಯನ್ನ ಮನೆಗೆ ಕರೆಸಿಕೊಂಡ ಟೆಕ್ಕಿಗೆ ಕಾದಿತ್ತು ಶಾಕ್​!

    ಪ್ರೀತಿಸಿ ಮದುವೆ ಆದ 8 ತಿಂಗಳಿಗೆ ಪತ್ನಿಯನ್ನೇ ಕೊಂದ ಪತಿರಾಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts