

ಕಡಬ: ತಾಲೂಕಿನ ಗುಂಡ್ಯ-ದೇರಣೆಯಿಂದ ಸುಬ್ರಹ್ಮಣ್ಯ ಸಂಪರ್ಕಿಸುವ ಸರ್ಕಾರಿ ಬಸ್ ಸಂಚಾರಕ್ಕೆ ಚಾಲನೆ ನೀಡಲಾಯಿತು.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ತೆಂಗಿನಕಾಯಿ ಒಡೆದು ಚಾಲನೆ ನೀಡಿ ಮಾತನಾಡಿ, ದೇರಣೆಯಿಂದ ಹೊಸದಾಗಿ ಸರ್ಕಾರಿ ಬಸ್ ಸಂಚಾರ ಆರಂಭವಾಗುವ ಮೂಲಕ ಸ್ಥಳೀಯರ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ. ಅರಣ್ಯದಿಂದ ಆವೃತವಾಗಿರುವ ದೇರಣೆ ಪ್ರದೇಶದಿಂದ ಜನರು ಸುಮಾರು 5 ಕಿ.ಮೀ. ದೂರ, ಕಾಡಾನೆ ಸೇರಿದಂತೆ ಕಾಡು ಪ್ರಾಣಿಗಳ ಭಯದಿಂದ ಸಂಚರಿಸಬೇಕಿತ್ತು. ಆ ಸಂಕಷ್ಟ ಇದೀಗ ತಪ್ಪಿದೆ ಎಂದರು.
ಕೊಂಬಾರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಧುಸೂಧನ ಕೊಂಬಾರು, ಉಪಾಧ್ಯಕ್ಷೆ ಸರಿತಾ, ಸದಸ್ಯ ಗಣೇಶ್ ಪಿಲಿಕಜೆ, ತಾ.ಪಂ. ಮಾಜಿ ಸದಸ್ಯೆ ಆಶಾ ಲಕ್ಷ್ಮಣ, ಬಿಳಿನೆಲೆ ಸಿ.ಎ. ಬ್ಯಾಂಕ್ ಮಾಜಿ ಅಧ್ಯಕ್ಷ ದಾಮೋದರ ಗುಂಡ್ಯ, ಕೆಡಿಪಿ ಸದಸ್ಯ ಪದ್ಮನಾಭ ದೇರಣೆ, ಪ್ರಮುಖರಾದ ನಾರಾಯಣ ನಿರಾಯ, ಗಿರೀಶ್ ಆಚಾರ್ಯ ಸುಬ್ರಹ್ಮಣ್ಯ, ಸತೀಶ್ ದೇರಣೆ, ಪದ್ಮನಾಭ ಅನಿಲ, ಚಿದಾನಂದ ದೇರಣೆ ಮೊದಲಾದವರಿದ್ದರು.