ದಾಖಲೆಯಲ್ಲಿದ್ದಂತೆ ಜಾಗ ಮಂಜೂರು - ಶಾಸಕ ಅಶೋಕ್ ರೈ ಸ್ಪಷ್ಟನೆ

Published on

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ನಾವು ನಾವು ತಿಕ್ಕಾಡಿಕೊಂಡು ಜನರಿಗೆ ಜಾಗ ಇಲ್ಲದಂತೆ ಮಾಡಲಾಗಿದೆ. ಅಕ್ರಮ ಸಕ್ರಮದಲ್ಲಿ ಕೃಷಿ ಮಾಡಿದ ಜಾಗವನ್ನು ಕೃಷಿಕರು ಕೇಳುತ್ತಿದ್ದು, ಸರ್ಕಾರದ ಜಾಗವನ್ನು ನೀಡಲಾಗುತ್ತಿದೆ. ಅಕ್ರಮ ಸಕ್ರಮ ಸಮಿತಿಗೆ ಜಾಗ ಮಂಜೂರು ಮಾಡುವ ವಿಶೇಷ ಅಽಕಾರವಿದ್ದು, ಕಾನೂನಿನಲ್ಲಿ ಅವಕಾಶಗಳಿದ್ದರೆ ನೀಡುತ್ತೇವೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಜಾಗ ಮಂಜೂರಾತಿಗೆ ನಾವು ಯಾರೂ ಹಣ ಪಡೆದುಕೊಳ್ಳುತ್ತಿಲ್ಲ. ಯಾರು ಏನು ಹೇಳಿದರೂ, ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ದಾಖಲೆಯಲ್ಲಿದ್ದಂತೆ ಜಾಗ ಮಂಜೂರು ಮಾಡುವ ಕಾರ್ಯ ಮಾಡುತ್ತೇವೆ. ಕೃಷಿ ಮಾಡಿದ ಜಾಗವನ್ನು ಮಿತಿಯಲ್ಲೇ ನೀಡಲಾಗುತ್ತದೆ. ಕೃಷಿ ಮಾಡಿ ಒಳ್ಳೆಯದಾಗುವುದಕ್ಕೆ ನಾವು ಬೆಂಬಲ ನೀಡುತ್ತೇವೆ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಮಾಜಿ ಶಾಸಕರ ಬಳಿ ಸವಾಲಿಗೆ ಹೋಗುವುದಿಲ್ಲ. ಮೂರು ವರ್ಷ ಅಭಿವೃದ್ಧಿ ಮಾಡುವುದಕ್ಕೆ ಅವಕಾಶ ಕೊಟ್ಟರೆ ಸಾಕು. ಮಾಜಿ ಶಾಸಕರು ಏನ್ನೆಲ್ಲಾ ಸಾಧನೆಗಳನ್ನು ಮಾಡಿದ್ದಾರೆ ಎಂಬುದೂ ಎಲ್ಲರೂ ಗಮನಿಸಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net