

ಕಡಬ: ಪಾಲ್ತಾಡಿ ಗ್ರಾಮದ ಚಾಕೋಟೆತ್ತಡಿ ಶ್ರೀ ಧರ್ಮರಸು ಉಳ್ಳಾಕುಲು ದೈವಸ್ಥಾನದಲ್ಲಿ ಏ.22ರಿಂದ 24ರವರೆಗೆ ಶ್ರೀಧರ್ಮರಸು ಉಳ್ಳಾಕುಲು ಮತ್ತು ಪರಿವಾರ ದೈವಗಳ ವರ್ಷಾವಧಿ ಜಾತ್ರೋತ್ಸವ ನಡೆಯಲಿದ್ದು, ಪೂರ್ವಭಾವಿಯಾಗಿ ಗೊನೆ ಮುಹೂರ್ತ ಹಾಗೂ ವಿಷುಕಣಿ ಸೋಮವಾರ ನೆರವೇರಿತು.
ಚಾಕೋಟೆತ್ತಡಿ ಶ್ರೀ ಧರ್ಮರಸು ಉಳ್ಳಾಕುಲು ದೈವಸ್ಥಾನದ ಗೌರವಾಧ್ಯಕ್ಷ ಸಂತೋಷ್ ಕುಮಾರ್ ರೈ ನಳೀಲು, ಅಧ್ಯಕ್ಷ ವಿನಯಚಂದ್ರ ಕೆಳಗಿನಮನೆ, ಉಪಾಧ್ಯಕ್ಷರಾದ ರುನಾಥ ರೈ ನಡುಕೂಟೇಲು, ವಿಠಲ ಶೆಟ್ಟಿ ಪಾಲ್ತಾಡಿ, ದಿವಾಕರ ಬಂಗೇರ ಬೊಳಿಯಾಲ, ಪದ್ಮಪ್ರಸಾದ್ ಕಲಾಯಿ, ಕೃಷ್ಣಪ್ರಸಾದ್ ಪಾರ್ಲ, ಪ್ರವೀಣ್ ರೈ ನಡುಕೂಟೇಲು, ಕಾರ್ಯದರ್ಶಿ ಜಯರಾಮ ಗೌಡ ದೊಡ್ಡ ಮನೆ, ಜತೆ ಕಾರ್ಯದರ್ಶಿಗಳಾದ ತಾರಾನಾಥ ಬೊಳಿಯಾಲ, ಖಜಾಂಚಿ ಪುರುಷೋತ್ತಮ ಅಂಗಡಿಹಿತ್ಲು, ಆರು ಮನೆಯ ಪ್ರಮುಖರಾದ ಪಾಲ್ತಾಡು ವಿನೋದ್ ರೈ ಪಾಲ್ತಾಡಿ ಗುತ್ತಿನಮನೆ, ಜನಾರ್ದನ ಗೌಡ ಕೆಳಗಿನಮನೆ, ಮೋನಪ್ಪ ಗೌಡ ದೊಡ್ಡಮನೆ, ಅಶೋಕ್ ಗೌಡ ಖಂಡಿಗೆ, ರಾಮಕೃಷ್ಣ ಗೌಡ ಅಂಗಡಿಹಿತ್ಲು, ಜನಾರ್ದನ ಬಂಗೇರ ಬೊಳಿಯಾಲ, ಪಾಲ್ತಾಡಿ ಉಳ್ಳಾಕುಲು ಫ್ರೆಂಡ್ಸ್ ಕ್ಲಬ್ ಕಾರ್ಯದರ್ಶಿ ಗಣೇಶ್ ಅಮೆಚ್ಚೋಡು ಮೊದಲಾದವರಿದ್ದರು.