

ಸುಳ್ಯ: ನಗರದ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಜ.26ರಿಂದ ನಡೆಯಲಿದ್ದು, ಇದರ ಗೊನೆ ಮುಹೂರ್ತ ಸೋಮವಾರ ನಡೆಯಿತು. ದೇವಸ್ಥಾನದ ಅರ್ಚಕ ನೀಲಕಂಠ ಭಟ್ ಪ್ರಾರ್ಥನೆ ಸಲ್ಲಿಸಿ ಗೊನೆಮುಹೂರ್ತ ನೆರವೇರಿಸಿದರು.
ಆಡಳಿತಾಧಿಕಾರಿ ಚಂದ್ರಕಾಂತ್ ಎಂ.ಆರ್, ಪ್ರಮುಖರಾದ ನಾರಾಯಣ ಕೇಕಡ್ಕ, ನವೀನ್ ಕುದ್ಪಾಜೆ, ಚಂದ್ರಶೇಖರ ಅಡ್ಪಂಗಾಯ, ಡಿ.ಎನ್. ವೆಂಕಟ್ರಮಣ, ಎ.ಟಿ.ಕುಸುಮಾಧರ, ಕೃಷ್ಣ ಬೆಟ್ಟ, ವಿಠಲ ಸರ್ವೆಯರ್, ದೀಪಕ್ ಅಳಿಕೆಮಜಲು, ರಘುನಾಥ ರೈ, ಶೀಲಾವತಿ ಅಳಿಕೆಮಜಲು, ವಾಸುದೇವ ಬೆಳ್ಳಿಪಾಡಿ, ಪದ್ಮನಾಭ ಅಳಿಕೆಮಜಲು, ತೀರ್ಥರಾಮ ನಡುಮನೆ ಮೊದಲಾದವರಿದ್ದರು.