ಬ್ಯಾಗ್‌ನಿಂದ ಚಿನ್ನಾಭರಣ ದೋಚಿದ ಕಳ್ಳರು

home theft 100 gram gold cash silver gone
ಸಾಂದರ್ಭಿಕ ಚಿತ್ರ
Published on

ಬಂಟ್ವಾಳ: ಮಹಿಳೆಯ ಬ್ಯಾಗ್‌ನಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವಾಗಿರುವ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳ್ತಂಗಡಿ ತಾಲೂಕು ಕಲ್ಮಂಜ ಗ್ರಾಮದ ನಡಿಗಲ್ ಆರ್ದಶ ನಗರ ನಿವಾಸಿ ಜಗದೀಶ ಅವರ ಪತ್ನಿ ಶಶಿಕಲಾ ಚಿನ್ನಾಭರಣ ಕಳೆದುಕೊಂಡವರು. ಮಗುವಿನ ಜತೆ ಗೋಳ್ತಮಜಲು ಗ್ರಾಮದ ನೆಟ್ಲದಲ್ಲಿರುವ ತಾಯಿ ಮನೆಗೆ ಬಂದು, ಗುರುವಾರ ವಾಪಸು ಗಂಡನ ಜತೆ ಬೆಳ್ತಂಗಡಿಗೆ ತೆರಳುವ ಉದ್ದೇಶದಿಂದ ಬಿ.ಸಿ.ರೋಡಿಗೆ ಬಂದಿದ್ದು, ಬಸ್ ನಿಲ್ದಾಣದ ಸಮೀಪದ ಅಂಗಡಿಯೊಂದರಿಂದ ತಿಂಡಿ ಖರೀದಿಸಿ, ಬೆಳ್ತಂಗಡಿಗೆ ಪ್ರಯಾಣಿಸುವುದಕ್ಕೆ ಬಸ್ ಹತ್ತುವ ವೇಳೆ ಬ್ಯಾಗ್‌ನೊಳಗಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನ ಕಳವಾಗಿದೆ.

ಮಗುವಿನ ಜತೆ ಗಂಡ ಬಸ್ ಹತ್ತಿದ್ದು, ಅವರ ಹಿಂದೆ ಶಶಿಕಲಾ ಬಸ್ ಹತ್ತುವ ಸಮಯ ಹಿಂಬದಿಯಿಂದ ಬ್ಯಾಗ್‌ನೊಳಗಿದ್ದ ಚಿನ್ನವಿದ್ದ ಪಾಕೆಟನ್ನು ಕಳವು ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಸುಮಾರು 45 ಗ್ರಾಂ. ತೂಕದ ಚಿನ್ನಾಭರಣಗಳು ಕಳ್ಳರ ಪಾಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net