

ಮಂಗಳೂರು: ನಗರದ ಕುಲಶೇಖರದ ಕೆಎಂಎ್ ಡೈರಿ ಬಳಿ ಇರುವ ಮನೆಯಲ್ಲಿ ನಡೆದ ಕಳ್ಳತನಕ ಪ್ರಕರಣದಲ್ಲಿ ತನಿಖೆ ನಡೆಸಿದ ನಗರ ಪೊಲೀಸರು ಕೊಡಗಿನ ಇಬ್ಬರು ಕಳ್ಳರನ್ನು ಬಂಧಿಸಿದ್ದಾರೆ.
ಕೊಡಗು ವೀರಾಜಪೇಟೆ ಬೆಳ್ಳುರು ಗ್ರಾಮ ನಿವಾಸಿ ಸಚಿನ್ ಮತ್ತು ಕೊಡಗು ಬಾಡಗಾ ಗ್ರಾಮ ನಿವಾಸಿ ನಿಶಾಂತ್ ಪ್ರಕರಣದ ಬಂಧಿತ ಆರೋಪಿಗಳು.
2024 ಮೇ 11ರಂದು ಕುಲಶೇಖರ ಕೆಎಂಎ್ ಡೈರಿ ಬಳಿಯಿರುವ ಮನೆಯ ಹೆಂಚು ತೆಗೆದು ಕಳ್ಳರು 87.5ಗ್ರಾಂ ಚಿನ್ನಾಭರಣ ಕಳವುಗೈದಿದ್ದರು. ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ 4,29,500ರೂ. ಮೌಲ್ಯದ ಚಿನ್ನಾಭರಣ, ಕೃತ್ಯಕ್ಕೆ ಉಪಯೋಗಿಸಿದ 7ಲಕ್ಷ ರೂ. ಬೆಲೆಬಾಳುವ ಬಲೆನೋ ಕಾರು ಸೇರಿ 11.30ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಕ್ರಿಮಿನಲ್ ಹಿನ್ನಲೆ: ಆರೋಪಿಗಳ ಪೈಕಿ ಸಚಿನ್ ವಿರುದ್ಧ ಕೊಡಗು ಜಿಲ್ಲೆಯ ಗೋಣಿಕೊಪ್ಪಲು ಪೊಲೀಸ್ ಠಾಣೆಯಲ್ಲಿ ಪೊಕ್ಸೋ ಪ್ರಕರಣದ ಹಾಗೂ ನಿಶಾಂತ್‌ನ ವಿರುದ್ಧ ಕೊಡಗು ಜಿಲ್ಲೆಯ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮನೆ ಕಳವು ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣಗಳು ದಾಖಲಾಗಿದೆ.
ಕಂಕನಾಡಿ ನಗರ ಠಾಣಾ ನಿರೀಕ್ಷಕ ಟಿ.ಡಿ. ನಾಗರಾಜ್ ನೇತೃತ್ವದಲ್ಲಿ ಪಿಎಸ್‌ಐ ರಾಘವೇಂದ್ರ ನಾಯ್ಕ, ಹುಸೇನಸಾಬ ಮತ್ತು ಸಿಬ್ಬಂದಿ ಜಯಾನಂದ, ರಾಜೇಶ್, ರಾಘವೇಂದ್ರ, ಸಂತೋಷ್, ಪುರುಷೋತ್ತಮ, ಗಂಗಾಧರ್, ಚೇತನ್, ರಾಜೆಸಾಬ್ ಮುಲ್ಲಾರವರು ಆರೋಪಿ ಮತ್ತು ಸೊತ್ತು ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.