

ಕೋಟ: ಎ.ಜಡ್ ಮಾರ್ಷಿಯಲ್ ಆರ್ಟ್ಸ್ ಅಕಾಡೆಮಿ ಪ್ರಾಯೋಜಕತ್ವದಲ್ಲಿ ಶಿವಮೊಗ್ಗದ ನೆಹರು ಒಳಾಂಗಣ ಸ್ಟೇಡಿಯಂನಲ್ಲಿ ಪ್ರಥಮ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್‌ಷಿಪ್ 2024ನಲ್ಲಿ ಪುಷ್ಪ ಕಿರಣ್ ಕುಂದಾಪುರ ಅವರ ಪುತ್ರ ಆರ್ಯನ್ ಕೆ.ಪೂಜಾರಿ ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಮತ್ತು ಕುಮಿಟೆ ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.ಅವರು ಸತತವಾಗಿ ಎಂಟನೇ ಬಾರಿ ಚಿನ್ನದ ಪದಕ ಗಳಿಸಿದ ಸಾಧಕರಾಗಿದ್ದು, ಕುಂದಾಪುರ ಕೆಡಿಎಫ್ ಸಂಸ್ಥೆಯ ಕೋಚ್ ಕಿರಣ್ ಕುಂದಾಪುರ ಅವರಲ್ಲಿ ತರಬೇತಿ ಪಡೆಯುತ್ತಿದ್ದಾರೆ.