

ಕೋಟ: ಕಾರ್ಕಡ ಗೆಳೆಯರ ಬಳಗದ 36ನೇ ವಾರ್ಷಿಕ ಮಹಾಸಭೆ ಕಾರ್ಕಡ ಹೊಸ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಕಾರ್ಯದರ್ಶಿ ಕೆ.ಶೀನ ವಾರ್ಷಿಕ ವರದಿ ವಾಚಿಸಿದರು. ಆಯವ್ಯಯವನ್ನು ಕೋಶಾಧಿಕಾರಿ ಕೋಶಾಧಿಕಾರಿ ಕೆ. ನಾಗರಾಜ ಉಪಾಧ್ಯ ಮಂಡಿಸಿದರು. ಬಳಿಕ ಮೂರು ವರ್ಷದ ಅವಧಿಗೆ ನೂತನ ಸಮಿತಿ ರಚಿಸಲಾಯಿತು. ಮತ್ತೊಂದು ಅವಧಿಗೆ ಅಧ್ಯಕ್ಷರಾಗಿ ಕೆ.ತಾರಾನಾಥ ಹೊಳ್ಳ ಮರು ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಕೆ.ಶಶಿಧರ ಮಯ್ಯ, ಕಾರ್ಯದರ್ಶಿಯಾಗಿ ಕೆ.ಶೀನ, ಜತೆ ಕಾರ್ಯದರ್ಶಿಯಾಗಿ ಕೆ. ಶ್ರೀಕಾಂತ ಐತಾಳ, ಖಜಾಂಚಿ ನಾಗರಾಜ ಉಪಾಧ್ಯ, ಕಾರ್ಯಕಾರಿ ಸಮಿತಿಯ ಪ್ರಮುಖರಾಗಿ ಕೆ.ಚಂದ್ರಕಾಂತ ನಾಯರಿ, ಕೆ. ಜಗದೀಶ ಆಚಾರ್ಯ, ಕೆ. ಶ್ರೀಪತಿ ಆಚಾರ್ಯ, ಕೆ. ತಮ್ಮಯ್ಯ, ಕೆ.ಉದಯ ಐತಾಳ, ಕೆ. ರಾಘವೇಂದ್ರ ದೇವಾಡಿಗ, ಬಡಾಹೋಳಿ ಕೆ. ಶೇಖರ, ಕೆ. ರಘ ಭಂಡಾರಿ ಆಯ್ಕೆ ಆಗಿದ್ದಾರೆ.