ಅರೆಬರೆ ಕಾಮಗಾರಿಗೆ ಬಾಲಕಿ ಬಲಿ; ನಿನ್ನೆ ಗುಂಡಿಗೆ ಬಿದ್ದಿದ್ದ ಹುಡುಗಿ ಇಂದು ಶವವಾಗಿ ಪತ್ತೆ!

Girl
Published on

ಕೊಪ್ಪಳ: ಅರೆಬರೆ ಕಾಮಗಾರಿ ಹಾಗೂ ನಿರ್ಲಕ್ಷ್ಯತನಕ್ಕೆ ಹದಿನೈದು ವರ್ಷದ ಬಾಲಕಿಯೊಬ್ಬಳು ಬಲಿಯಾಗಿರುವ ದುರ್ಘಟನೆಯೊಂದು ಸಂಭವಿಸಿದೆ. ಕೊಪ್ಪಳ ಜಿಲ್ಲೆಯ ಹೊಸಪೇಟೆ ರಸ್ತೆಯಲ್ಲಿ ಈ ಅವಘಡ ನಡೆದಿದೆ.

ಶ್ರೀದೇವಿ ಸಾವಿಗೀಡಾದ ಬಾಲಕಿ. ಕೊಪ್ಪಳದ ಹೊಸಪೇಟೆ ರಸ್ತೆಯ ಕೆ.ಎಸ್​. ಆಸ್ಪತ್ರೆಯ ಮುಂಭಾಗ ಈ ದುರಂತ ಸಂಭವಿಸಿದೆ. ನಿನ್ನೆ ಈ ಬಾಲಕಿಯ ಸುಳಿವು ಸಿಗದ ಕಾರಣ ನಾಪತ್ತೆ ದೂರು ನೀಡಲಾಗಿತ್ತು. ಆದರೆ ಇಂದು ಈಕೆ ಗುಂಡಿಯಲ್ಲಿ ಶವವಾಗಿ ಪತ್ತೆ ಆಗಿದ್ದಾಳೆ.

ಆಸ್ಪತ್ರೆ ಮುಂಭಾಗ ಕಟ್ಟಡ ನಿರ್ಮಾಣಕ್ಕಾಗಿ ಗುಂಡಿ ತೆಗೆಯಲಾಗಿತ್ತು. ಆದರೆ ನಿನ್ನೆ ಭಾರಿ ಮಳೆಯಾದ ಕಾರಣ ಗುಂಡಿಯಲ್ಲಿ ನೀರು ತುಂಬಿಕೊಂಡಿತ್ತು. ಹೀಗಾಗಿ ಗುಂಡಿಯ ಅರಿವಾಗದೆ ಬಾಲಕಿ ಅದರೊಳಕ್ಕೆ ಬಿದ್ದಿದ್ದು, ಮುಳುಗಿ ಸಾವಿಗೀಡಾಗಿದ್ದಾಳೆ.

ನಾಪತ್ತೆ ದೂರಿನ ಹಿನ್ನೆಲೆಯಲ್ಲಿ ನಿನ್ನೆಯಿಂದ ಹುಡುಕಾಟ ಆರಂಭವಾಗಿದ್ದು, ಇಂದು ಆ ಗುಂಡಿಯಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. ಈ ಸಂಬಂಧ ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net