ಪ್ರೇಯಸಿಗೆ ಕೈಕೊಟ್ಟು ಮತ್ತೊಬ್ಬಳ ಜತೆ ಸುತ್ತಾಟ; ಇಲಿ ಪಾಷಾಣ ತಿಂದು ಪ್ರಾಣ ಬಿಟ್ಟ ಯುವತಿ

Nisarga
Published on

ಮೈಸೂರು: ತನ್ನನ್ನು ಪ್ರೀತಿಸಿ ಹುಡುಗ ಕೈಕೊಟ್ಟಿದ್ದಕ್ಕೆ ಮನನೊಂದು ಯುವತಿಯೋರ್ವಳು ಡೆತ್​ ನೋಟ್​ ಬರೆದಿಟ್ಟು ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆ ಕೆ.ಆರ್​.ನಗರ ತಾಲ್ಲೂಕಿನ ಗೌಡನಹಳ್ಳಿಯಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ನಿಸರ್ಗ(20) ಎಂದು ಗುರುತಿಸಲಾಗಿದ್ದು, ಈಕೆ ಕೆ.ಆರ್​.ನಗರ ಪ್ರಥಮಿ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷ ಬಿಕಾಂ ವ್ಯಾಸಂಗ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ನಾಲ್ಕು ವರ್ಷಗಳ ಪ್ರೀತಿ

ನಿಸರ್ಗ ತನ್ನದೇ ಕಾಲೇಜಿನಲ್ಲಿ ಒದುತ್ತಿದ್ದ ಸುಹಾಸ್​ ಎಂಬುವವನ ಜೊತೆ ಪರಿಚಯವಾಗಿದೆ. ಪರಿಚಯ ಸ್ನೇಹವಾಗಿ ಪ್ರೀತಿಗೆ ತಿರುಗುತ್ತದೆ. ನಾಲ್ಕು ವರ್ಷಗಳು ಇವರು ಜೊತೆಯಾಗಿ ತರಿಗಾಡುತ್ತಾರೆ. ಆದರೆ, ದಿನ ಕಳೆದಂತೆ ಪ್ರಿಯತಮನ ವರ್ತನೆಯಲ್ಲಿ ಬದಲಾವಣೆಯನ್ನು ಗಮನಿಸಿದ ನಿಸರ್ಗ ಆತ ಅನನ್ಯಾ ಎಂಬ ಯುವತಿಯೊಂದಿಗೆ ಸ್ನೇಹ ಬೆಳೆಸಿರುವುದು ತಿಳಿದು ಬರುತ್ತದೆ.

NIsha

ಈ ವಿಚಾರ ತಿಳಿದು ನಿಸರ್ಗ ಮಾನಸಿಕ ಖಿನ್ನತೆಗೊಳಗಾಗಿ ಕೈ ಕೊಯ್ದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅದರ ಫೋಟೋವನ್ನು ಪೋಸ್ಟ್​ ಮಾಡಿದ್ದಳು. ಈ ವಿಚಾರವನ್ನು ಅನನ್ಯಾ ಪೋಷಕರಿಗೂ ಸಹ ತಿಳಿಸಿದ್ದಾಳೆ. ಆದರೆ, ಅನನ್ಯಾ ಪೋಷಕರು ನಿಸರ್ಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಸಾಯುವಂತೆ ಪ್ರೇರೇಪಿಸಿದ್ದರು ಎಂಬ ಆರೋಪ ಕೇಳಿ ಬಂದಿದೆ.

ಇಲಿ ಪಾಷಾಣ ಸೇವನೆ

ಇದರಿಂದ ತೀವ್ರವಾಗಿ ಮನನೊಂದಿದ್ದ ನಿಸರ್ಗ ಡೆತ್​ನೋಟ್​ ಬರೆದಿಟ್ಟು ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕೂಡಲೇ ಅಸ್ವಸ್ಥಳನ್ನು ಆಸ್ಪತ್ರೆಗೆ ದಾಖಲಿಸಿಲಾಯಿತಾದರೂ ಆಕೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಆರೋಪಿ ಸುಹಾಸ್​ ತಲೆಮಾರಿಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಈ ಸಂಬಂಧ ಕೆ.ಆರ್.ನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದ್ದು ಆರೋಪಿ ಸುಹಾಸ್​, ಯುವತಿ ಅನನ್ಯಾ ಹಾಗೂ ಆಕೆಯ ಪೋಷಕರ ವಿರುದ್ಧ FIR ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net