ಗಿಳಿವಿಂಡು ಕಾಮಗಾರಿ ಅಪೂರ್ಣ

Bdk_Gilivindu (1)
Published on

ಮಂಜೇಶ್ವರ: ಪ್ರಥಮ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ನಿವಾಸ ಪಕ್ಕದಲ್ಲಿ ಜನತೆಯ ತೆರಿಗೆ ಹಣದಲ್ಲಿ ಸಭಾಂಗಣ ನಿರ್ಮಾಣ ಶುರುವಾಗಿ 10 ವರ್ಷ ಸಂದರೂ ಕಾಮಗಾರಿ ಪೂರ್ಣಗೊಳ್ಳದೆ ಸ್ಥಳೀಯ ಕನ್ನಡಿಗರಿಗೆ, ಕನ್ನಡ ಕಾರ್ಯಕ್ರಮಗಳಿಗೆ, ಭಾಷಾ ಚಟುವಟಿಕೆಗಳಿಗೆ ಅಲಭ್ಯವಾಗಿರುವುದು ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಯವರಿಗೆ ಸರ್ಕಾರ ಎಸಗಿರುವ ಘೋರ ಅವಮಾನ ಎಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ.ಎಂ.ಆರೋಪಿಸಿದ್ದಾರೆ.

ಗೋವಿಂದ ಪೈಗಳ ಸಾಧನೆಗೆ ಪ್ರತಿಬಿಂಬವಾಗಿ ನೂರಾರು ಕನ್ನಡ ಅಭಿಮಾನಿಗಳಿಗೆ, ಸ್ಥಳೀಯ ಕಲಾ-ಸಾಂಸ್ಕೃತಿಕ ರಂಗಕ್ಕೆ ವೇದಿಕೆಯಾಗಬೇಕಿದ್ದ ಸಭಾಂಗಣದ ಅನಾಸ್ಥೆ ಕನ್ನಡಿಗರಿಗೆ ಮಾತ್ರವಲ್ಲ ಗೋವಿಂದ ಪೈಯವರಿಗೆ ಮಾಡುತ್ತಿರುವ ಅವಮಾನ ಎಂದು ಹೇಳಿದ್ದಾರೆ. ಸಭಾಂಗಣ ಕಾಮಗಾರಿ ಕೂಡಲೇ ಪೂರ್ತಿಗೊಳಿಸಿ ಕನ್ನಡ ಕಲಾ ಸಾಂಸ್ಕೃತಿಕ ಚಟುವಟಿಕೆಗಳಿಗೆ ಮೀಸಲಿಡಬೇಕೆಂದು ಬಿಜೆಪಿ ಮಂಡಲ ಸಭೆಯಲ್ಲಿ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net