ಸಾಹಿತ್ಯ ಸ್ವರಚನೆ ಪ್ರೇರಣಾ ಕಮ್ಮಟ

New Project (7)
Published on

ಬಂಟ್ವಾಳ: ಮಕ್ಕಳ ಕಲಾಲೋಕ ಕನ್ನಡ ಸಾಹಿತ್ಯ ಪರಿಷತ್ ಬಂಟ್ವಾಳ ವತಿಯಿಂದ, ಪಾಣೆಮಂಗಳೂರು ಶ್ರೀ ವೀರವಿಠಲ ಸ್ವಾಮಿ ಶಾಲೆ ಸಹಯೋಗದಲ್ಲಿ, ಬಂಟ್ವಾಳ ನಗರ ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗಾಗಿ ಸಾಹಿತ್ಯ ಸ್ವರಚನೆ ಪ್ರೇರಣಾ ಕಮ್ಮಟ ನಡೆಯಿತು.

ಪಾಣೆಮಂಗಳೂರು ಅನುದಾನಿತ ಹಿ.ಪ್ರಾ.ಶಾಲಾ ಸಂಚಾಲಕ ಯೋಗೀಶ್ ಪೈ ಕಮ್ಮಟ ಉದ್ಘಾಟಿಸಿದರು. ಮುಖ್ಯಶಿಕ್ಷಕ ವಿನೋದ್ ಎನ್. ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಸಾಹಿತಿ ವಿಂಧ್ಯಾ ಎಸ್.ರೈ, ಮಕ್ಕಳ ಕಲಾಲೋಕದ ಗೌರವ ಸಲಹೆಗಾರ ಭಾಸ್ಕರ ಅಡ್ವಳ ಸಹಕರಿಸಿದರು.

ಬಂಟ್ವಾಳ ನಗರ ಸಿ.ಆರ್.ಪಿ. ಸತೀಶ್ ರಾವ್, ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢಶಾಲಾ ಶಿಕ್ಷಕಿ ತೇಜಸ್ವಿನಿ, ಬಂಟ್ವಾಳ ಎಸ್.ವಿ.ಎಸ್. ಪ್ರೌಢಶಾಲೆ ಶಿಕ್ಷಕ ದಾಮೋದರ ಪಡಿಯಾರ್ ಉಪಸ್ಥಿತರಿದ್ದರು. 31 ವಿದ್ಯಾರ್ಥಿಗಳು ಭಾಗವಹಿಸಿದರು.

ಸಮಾರೋಪ ಸಮಾರಂಭದಲ್ಲಿ ಮಕ್ಕಳ ಸ್ವರಚನೆಗಳ ಹಸ್ತ ಪತ್ರಿಕೆಯನ್ನು ಎಸ್.ವಿ.ಎಸ್ ಮುಖ್ಯ ಶಿಕ್ಷಕ ವಿನೋದ್ ಎನ್. ಅನಾವರಣಗೊಳಿಸಿದರು. ಮಕ್ಕಳ ಕಲಾಲೋಕದ ಅಧ್ಯಕ್ಷ ರಮೇಶ ಎಂ.ಬಾಯಾರು ಪ್ರಸ್ತಾವನೆ ಮಾಡಿದರು. ಕಾರ್ಯದರ್ಶಿ ಪುಷ್ಪಾ ಎಚ್. ಸ್ವಾಗತಿಸಿದರು. ಸಹಶಿಕ್ಷಕ ಕೇಶವ ಬಂಗೇರ ವಂದಿಸಿದರು. ರಾಜೇಂದ್ರ ಗೌಡ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net