ಇಂದ್ರಪ್ರಸ್ಥದಲ್ಲಿ ವಿದ್ಯಾರ್ಥಿಗಳ ವ್ಯಾಪಾರ ಮೇಳ

upp
Published on

ಉಪ್ಪಿನಂಗಡಿ: ಪಠ್ಯದೊಂದಿಗೆ ವ್ಯವಹಾರಿಕ ಜ್ಞಾನ ಮೂಡಿಸುವ ವ್ಯಾಪಾರ ಮೇಳವನ್ನು ಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾಲಯದಲ್ಲಿ ಮಕ್ಕಳಿಗಾಗಿ ಏರ್ಪಡಿಸಲಾಯಿತು. ವಸ್ತುವಿನ ಮೂಲ ಬೆಲೆ, ಮಾರಾಟ ಬೆಲೆ ಮತ್ತದರಿಂದ ಉಂಟಾಗುವ ಲಾಭ ನಷ್ಟದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಇಂದ್ರಪ್ರಸ್ಥ ವಿದ್ಯಾಲಯದ ಆಡಳಿತ ಮಕ್ಕಳಿಂದಲೇ ವ್ಯಾಪಾರ ಮಾಡಿಸಿ ವ್ಯವಹಾರಿಕ ಕೌಶಲ ಮೂಡಿಸಿದೆ.

ಇಂದ್ರಪ್ರಸ್ಥ ವಿದ್ಯಾಲಯದ ಹಳೇ ವಿದ್ಯಾರ್ಥಿಉದ್ಯಮಿ ಸಚಿನ್ ಉದ್ಘಾಟಿಸಿದರು. ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್, ಸಂಘದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ವೆಂಕಟರಮಣ ರಾವ್, ಇಂದ್ರಪ್ರಸ್ಥ ವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಕರುಣಾಕರ ಸುವರ್ಣ, ಸಂಚಾಲಕ ಸುಬ್ರಹ್ಮಣ್ಯ ಭಟ್, ಶ್ರೀ ರಾಮ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಸುನೀಲ್ ಅನಾವು, ಪ್ರಮುಖರಾದ ಸುಧಾಕರ ಶೆಟ್ಟಿ, ರಾಜೇಶ್ ಪೈ, ವಂದನಾ ಶರತ್, ಸ್ವಾತಿ ಅಜಯ್, ಸುರೇಶ್ ಜಿ, ರವೀಂದ್ರ ಆಚಾರ್ಯ, ಜಯಪ್ರಕಾಶ್ ಕಡಮಾಜೆ, ಡಾ.ನಿರಂಜನ್ ರೈ, ಕರಾಯ ರಾಘವೇಂದ್ರ ನಾಯಕ್, ಸಂದೀಪ್ ಭಟ್, ಅಬೂಬಕ್ಕರ್ ಸಿದ್ದಿಕ್, ನ್ಯಾಯವಾದಿ ರಾಘವೇಂದ್ರ ನಾಯಕ್, ಗುಣಕರ ಅಗ್ನಾಡಿ, ಕೆ.ವಿ.ಪ್ರಸಾದ್, ಆದೇಶ್ ಶೆಟ್ಟಿ, ಪ್ರಶಾಂತ್ ಪೈ ಬಾರ್ಯ, ಸುಂದರ ಗೌಡ, ಪ್ರಾಂಶುಪಾಲ ಎಚ್.ಕೆ.ಪ್ರಕಾಶ್, ವಿದ್ಯಾಲಯದ ಮುಖ್ಯಶಿಕ್ಷಕ ವೀಣಾ ಪ್ರಸಾದ್ ಮೊದಲಾದವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net