ಕಡಬ: ಪ್ರತಿಯೊಂದು ಮಗುವಿನಲ್ಲ್ಲಿ ಪ್ರತಿಭೆ ಹುದುಗಿರುತ್ತದೆ. ಅದು ಹೊರಬರಲು ವೇದಿಕೆ ಸಿಗಬೇಕು. ಸುಪ್ತ ಪ್ರತಿಭೆ ಗಳು ಬೆಳಕಿಗೆ ಬರಲು ಎಲ್ಲರ ಪ್ರೋತ್ಸಾಹ ಅಗತ್ಯ. ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳು ಅದಕ್ಕೆ ಪೂರಕವಾಗಿದೆ ಎಂದು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಶಿಕ್ಷಣ ಸಂಯೋಜಕ ಹರಿಪ್ರಸಾದ್ ಹೇಳಿದರು.
ಕಡಬದ ಕ್ನಾನಾಯ ಜ್ಯೋತಿ ಆಂಗ್ಲ ವಾಧ್ಯಮ ಪ್ರೌಢಶಾಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು ಆಶ್ರಯದಲ್ಲಿ ನಡೆದ ಕಡಬ ವಲಯಮಟ್ಟದ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿ ಸ್ಪರ್ಧೆ ಪ್ರತಿಭಾ ಜ್ಯೋತಿ ಕಾರ್ಯಕ್ರಮವನ್ನು ಉದ್ಘಾಟಿಸಿ ವಾತನಾಡಿದರು.
ಕಡಬದ ಕ್ನಾನಾಯ ಜ್ಯೋತಿ ಆಂಗ್ಲ ವಾಧ್ಯಮ ಪ್ರೌಢಶಾಲೆಯ ಸಂಚಾಲಕ ಅನೀಶ್ ಫಿಲಿಪ್ ಅಧ್ಯಕ್ಷತೆ ವಹಿಸಿದ್ದರು. ಕಡಬ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂದ ಕಾರ್ಯದರ್ಶಿ ಬಾಲಕೃಷ್ಣ, ಶಾಲಾ ಶಿಕ್ಷಕ–ರಕ್ಷಕ ಸಂದ ಅಧ್ಯಕ್ಷ ಮಂಜುನಾಥ ಮರ್ದಾಳ, ಮುಖ್ಯಶಿಕ್ಷಕಿ ಸಿಸ್ಟರ್ ಮರಿಯಾ ಲೂಯಿಸ ಶುಭಹಾರೈಸಿದರು. ಆಲಂಕಾರು ಸಿಆರ್‌ಪಿ ಪ್ರಕಾಶ್ ಬಾಕಿಲ ಉಪಸ್ಥಿತರಿದ್ದರು.
ಕಾರ್ಯಕ್ರಮದ ನೋಡಲ್ ಅಧಿಕಾರಿ ಕುಸುವಾಧರ ಎಚ್.ಸ್ವಾಗತಿಸಿದರು. ಕಡಬ ಸಿಆರ್‌ಪಿ ಗಣೇಶ್ ನಡುವಾಲ್ ಪ್ರಸ್ತಾವನೆಗೈದರು. ಶಿಕ್ಷಕಿ ದುರ್ಗಾಸರಿತಾ ನಿರೂಪಿಸಿದರು. ವಿಮಲಾ ವಂದಿಸಿದರು.
ಸಾಧನೆಯ ಹಾದಿಯಲ್ಲಿ ಎಡರುತೊಡರುಗಳು ಇರುವುದು ಸಹಜ. ಆದರೆ ಸಾಧಿಸಬೇಕೆನ್ನುವ ಛಲ ನಮ್ಮನ್ನು ಯಶಸ್ಸಿನ ಕಡೆಗೆ ಕೊಂಡೊಯ್ಯುತ್ತದೆ. ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ನಮ್ಮ ಕೌಶಲ ಇನ್ನಷ್ಟು ವೃದ್ಧಿಯಾಗುತ್ತದೆ.
ಅನೀಶ್ ಫಿಲಿಪ್, ಕಡಬ ಕ್ನಾನಾಯ ಜ್ಯೋತಿ ಆಂಗ್ಲ ವಾಧ್ಯಮ ಪ್ರೌಢಶಾಲಾ ಸಂಚಾಲಕ
https://www.vijayavani.net/diwali-festival-2