ಸತ್ತ ಹಂದಿಗಳ ದುರ್ವಾಸನೆಯಿಂದ ಮುಕ್ತಿ ಕೊಡಿಸಿ

Get rid of the stench of dead pigs
ಬಸವನಬಾಗೇವಾಡಿ ಪಟ್ಟಣದ ಗಲ್ಲಿಯೊಂದರಲ್ಲಿ ಹಂದಿಗಳ ಗುಂಪು ಸಂಚರಿಸುತ್ತಿರುವುದು.
Published on

ಬಸವನಬಾಗೇವಾಡಿ: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ನಿತ್ಯ ನೂರಾರು ಹಂದಿಗಳು ಸಾಂಕ್ರಾಮಿಕ ರೋಗದಿಂದ ಸಾವನ್ನಪ್ಪುತ್ತಿದ್ದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ಸಾಂಕ್ರಾಮಿಕ ರೋಗಗಳಿಂದ ಸಾಯುತ್ತಿರುವ ಹಂದಿಯಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬ ಭಯ ಜನರಲ್ಲಿ ಹುಟ್ಟುತ್ತಿದೆ.

ಸಂಬಂಧಿತ ಇಲಾಖೆಯವರು ಹಂದಿಗಳು ಸತ್ತಿರುವುದು ಕಣ್ಣಿಗೆ ಬಿದ್ದರೆ ಮಾತ್ರ ಸಾಗಾಟ ಮಾಡುತ್ತಿದ್ದಾರೆ. ಗಟಾರುಗಳಲ್ಲಿ ಮತ್ತು ಬಿದ್ದ ಮನೆಗಳಲ್ಲಿ ಹಂದಿಗಳು ಸತ್ತುಬಿದ್ದಿದ್ದು, ಗಮನಕ್ಕೆ ಬಾರದೆ ದುರ್ವಾಸನೆಯಿಂದ ಜನರು ಮೂಗು ಬಾಯಿ ಮುಚ್ಚಿ ಸಂಚರಿಸಬೇಕಾದ ಸ್ಥಿತಿ ಬರುತ್ತಿದೆ.

ಆಗ ಹಂದಿ ಸತ್ತಿರುವ ಸ್ಥಳದ ಸುತ್ತಮುತ್ತಲಿನ ಜನರು ಈ ಕುರಿತು ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿಗೆ ತಿಳಿಸಿದಾಗ ಮಾತ್ರ ಅವುಗಳನ್ನು ಹುಡುಕಿ ಸಾಗಿಸುತ್ತಾರೆ.

ಒಂದು ವೇಳೆ ಆ ಸಿಬ್ಬಂದಿ ನಿರ್ಲಕ್ಷೃ ವಹಿಸಿದ್ದಲ್ಲಿ ಆ ಸುತ್ತಮುತ್ತಲಿನ ಪ್ರದೇಶದ ಜನರ ಗೋಳು ಹೇಳ ತೀರದಂತಾಗಿದೆ. ಸತ್ತ ಹಂದಿಗಳ ದುರ್ವಾಸನೆ ಜನರಿಗೆ ತಲೆ ನೋವು ತರಿಸಿದೆ.

ಪಟ್ಟಣದ ಗಣೇಶ ನಗರ, ಓಂ ನಗರ, ಸಂಗೊಳ್ಳಿ ರಾಯಣ್ಣ ವೃತ್ತ, ತೆಲಗಿ ರಸ್ತೆ, ಡಿಸಿಸಿ ಬ್ಯಾಂಕ್ ಮುಂದುಗಡೆ ಇರುವ ಗೌಡರ ಜಾಗೆ ಹಾಗೂ ಪಟ್ಟಣದ ವಿವಿಧ ಗಲ್ಲಿಗಳಲ್ಲಿ ತಿಪ್ಪೆ ಗುಂಡಿ, ಮುಳ್ಳು ಕಂಟಿ, ಬಿದ್ದ ಮನೆಗಳಲ್ಲಿ ಹಂದಿಗಳು ಮಲಗಿದ್ದಲ್ಲೇ ಸಾವನ್ನಪ್ಪುತ್ತಿರುವುದರಿಂದ ಇದಕ್ಕೇನು ಕಾರಣ? ಎಂಬುದು ಸಾರ್ವಜನಿಕರ ಪ್ರಶ್ನೆ.

ಸ್ಥಳೀಯ ಸಂಸ್ಥೆಯವರು, ಆರೋಗ್ಯ ಇಲಾಖೆಯವರು ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಮುನ್ನ ತಕ್ಷಣ ಸೂಕ್ತ ಚಿಕಿತ್ಸೆ ನೀಡಿ ಸಾರ್ವಜನಿಕರನ್ನು ಕಾಪಾಡಬೇಕು ಎಂಬ ಒತ್ತಾಯ ಜನರಿಂದ ಕೇಳಿಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net