

ಮುದ್ದೇಬಿಹಾಳ: ಹೆಚ್ಚು ಶಬ್ಧ ಮಾಡುತ್ತ ಶಬ್ಧ ಮಾಲಿನ್ಯಕ್ಕೆ ಕಾರಣವಾಗಿದ್ದ ಎರಡು ಬುಲೆಟ್ಗಳನ್ನು ಸ್ಥಳೀಯ ಪಿಎಸ್ಐ ಸಂಜಯತಿಪ್ಪರಡ್ಡಿ ಮತ್ತು ಸಿಬ್ಬಂದಿ ಗುರುವಾರ ವಶಪಡಿಸಿಕೊಂಡು ಸವಾರರಿಗೆ ಬಿಸಿ ಮುಟ್ಟಿಸಿದರು.
ಈ ಹಿಂದೆ ಇಂಥದ್ದೇ ಪ್ರಕರಣಗಳಲ್ಲಿ ಹೆಚ್ಚು ಶಬ್ಧ ಮಾಡುತ್ತ ತಿರುಗಾಡುತ್ತಿದ್ದ ಬೈಕ್ಗಳನ್ನು ವಶಪಡಿಸಿಕೊಂಡಿದ್ದರೂ ಇಂಥ ಘಟನೆಗಳು ಮರುಕಳಿಸುತ್ತಿರುವುದರಿಂದ ಮತ್ತೊಮ್ಮೆ ಕಾರ್ಯಾಚರಣೆಗಿಳಿದ ತಂಡ ಬೈಕ್ ಸಮೇತ ಬೈಕ್ ಸವಾರರನ್ನು ಠಾಣೆಗೆ ಕರೆತಂದು ಸಂಜೆಯವರೆಗೂ ಬೈಕ್ಗಳನ್ನು ಠಾಣೆಯಲ್ಲಿ ನಿಲ್ಲಿಸಿಕೊಂಡಿದ್ದರು. ನಂತರ ದಂಡ ವಿಧಿಸಿ, ಬದಲಾಯಿಸಿದ ಸೈಲೆನ್ಸ್ರಗಳನ್ನು ಬೈಕ್ಗಳ ಮಾಲೀಕರಿಂದಲೇ ಬಿಚ್ಚಿಸಿ ಕಂಪನಿ ಫಿಟ್ಟೆಡ್ ಸೈಲೆನ್ಸ್ಗಳನ್ನು ಅಳವಡಿಸಿ ಇನ್ನೊಮ್ಮೆ ಹೀಗೆ ಮಾಡದಂತೆ ಎಚ್ಚರಿಕೆ ನೀಡಿ ಕಳಿಸಿದರು.
ಕಾರ್ಖಾನೆಯಿಂದ ಸೈಲೆನ್ಸರ್ ಫಿಟ್ಟಿಂಗ್ ಆಗಿ ಬರುವ ಬೈಕ್ಗಳು ಅತಿಯಾದ ಶಬ್ಧ ಹೊರಡಿಸುವುದಿಲ್ಲ. ಆದರೆ ಕಾರ್ಖಾನೆಯ ಫಿಟಿಂಗ್ ಸೈಲೆನ್ಸ್ರ್ ಪೈಪ್ ತೆಗೆದು ಮಾಡಿಫೈ ಮಾಡಿದ ಸೈಲೆನ್ಸರ್ ಪೈಪ್ಗಳನ್ನು ಬಳಸುವುದರಿಂದ ಕರ್ಕಶ ಶಬ್ಧ ಹೊರಬಂದು ಸಾರ್ವಜನಿಕರಿಗೆ, ಬಡಾವಣೆಗಳ ನಿವಾಸಿಗಳಿಗೆ ಸಾಕಷ್ಟು ಕಿರಿಕಿರಿ ತಂದೊಡ್ಡುತ್ತಿರುವ ದೂರುಗಳ ಬಂದ ಹಿನ್ನೆಲೆ ಪೊಲೀಸರು ಈ ಕ್ರಮಕ್ಕೆ ಮುಂದಾಗಿದ್ದರು.
ಪಟ್ಟಣದಲ್ಲಾಗಲಿ ಅಥವಾ ಗ್ರಾಮೀಣ ಪ್ರದೇಶದಲ್ಲಾಗಲಿ ಬದಲಾಯಿಸಿದ ಸೈಲೆನ್ಸ್ರ್ ಅಳವಡಿಸಿ ಕರ್ಕಶ ಶಬ್ಧ ಹೊರಡಿಸುವ ಬೈಕ್ಗಳು ರಸ್ತೆಗಳಲ್ಲಿ ಸಂಚರಿಸುತ್ತಿರುವುದು ಕಂಡು ಬಂದಲ್ಲಿ ನಿರ್ದಾಕ್ಷಿಣ್ಯವಾಗಿ ವಶಪಡಿಸಿಕೊಂಡು ದಂಡ ವಿಧಿಸಲಾಗುತ್ತದೆ. ಪದೇ ಪದೇ ಇಂಥದ್ದು ಮರುಕಳಿಸಿದಲ್ಲಿ ಅಂಥ ಬೈಕ್ಗಳನ್ನು ಸೀಜ್ ಮಾಡಿ ಕೋರ್ಟ್ಗೆ ಕಳಿಸಲಾಗುವುದು ಎಂದು ಪಿಎಸ್ಐ ಸಂಜಯ ತಿಪ್ಪರಡ್ಡಿ ಎಚ್ಚರಿಕೆ ನೀಡಿದ್ದಾರೆ.