ರಸ್ತೆ ಕಾಮಗಾರಿ ವಾಹನಕ್ಕೆ ಗ್ಯಾಸ್ ಟ್ಯಾಂಕರ್ ಡಿಕ್ಕಿ

gas tanker
ಅಪಘಾತವಾಗಿ ವಾಹನ ಜಖಂಗೊಂಡಿರುವುದು.
Published on

ಬ್ರಹ್ಮಾವರ: ರಾಷ್ಟ್ರೀಯ ಹೆದ್ದಾರಿ 66ರ ಬ್ರಹ್ಮಾವರ ಹೋಲಿ ಫ್ಯಾಮಿಲಿ ಚರ್ಚ್ ಬಳಿ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಹೈವೆಯಲ್ಲಿ ಹೋಗುತ್ತಿದ್ದ ಭಾರತ್ ಗ್ಯಾಸ್ ಟ್ಯಾಂಕರ್, ರಸ್ತೆ ಕಾಮಗಾರಿಯ ವಾಹನವೊಂದಕ್ಕೆ ಡಿಕ್ಕಿ ಹೊಡೆದು ಸರ್ವಿಸ್ ರಸ್ತೆ ಹಾರಿ ಬಂದು ನಿಂತಿದೆ.

ಡಿಕ್ಕಿ ರಭಸಕ್ಕೆ ಟ್ಯಾಂಕರ್ ಚಾಲಕನ ಕಾಲು ತುಂಡಾಗಿದ್ದು. ಸ್ಥಳಿಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ನೂರಾರು ವಿದ್ಯಾರ್ಥಿಗಳು ಸಂಚರಿಸುವ ಹೊತ್ತಿನಲ್ಲಿ ಘಟನೆ ಸಂಭವಿಸಿದರೂ ಯಾವುದೇ ಪ್ರಾಣಾಪಾಯವಾಗಿಲ್ಲ. ಕೆಲವು ಹೊತ್ತು ರಸ್ತೆ ಸಂಚಾರ ಸ್ಥಗಿತವಾಗಿ ಬಳಿಕ ಬ್ರಹ್ಮಾವರ ಪೊಲೀಸ್ ಅಧಿಕಾರಿಗಳು ಆಗಮಿಸಿ ವಾಹನ ತೆರವು ಮಾಡಿದ ಬಳಿಕ ಸಂಚಾರ ಆರಂಭಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net