ಕಾರು ಬಸ್ಸು ನಡುವೆ ಅಪಘಾತ: ಮಹಿಳೆ ಮೃತ್ಯು

hebri accident
ಹೆಬ್ರಿ 28 ಜನವರಿ 01ಎ: ಅಪಘಾತದ ತೀವ್ರತೆಗೆ ವಾಹನ ನುಜ್ಜುಗುಜ್ಜಾಗಿರುವುದು.
Published on

ಹೆಬ್ರಿ: ತಾಲೂಕಿನ ನಾಡ್ಪಾಲು ಗ್ರಾಮದ ಜಕ್ಕನ ಮಕ್ಕಿ ಎಂಬಲ್ಲಿ ಭಾನುವಾರ ಇನ್ನೋವಾ ಕಾರೊಂದು ಅತೀ ವೇಗ ಮತ್ತು ಅಜಾಗೂರುಕತೆಯಿಂದ ಚಲಾಯಿಸಿ ಸರ್ಕಾರಿ ಬಸ್ಸಿಗೆ ಡಿಕ್ಕಿಯಾಗಿದೆ. ಪರಿಣಾಮವಾಗಿ ಓರ್ವ ಮಹಿಳೆ ಮೃತಪಟ್ಟಿದ್ದು, ಸಹ ಪ್ರಯಾಣಿಕರಿಗೆ ಗಾಯಗಳಾಗಿದೆ.

ಇನೋವಾ ಕಾರು ಹೆಬ್ರಿಯಿಂದ ಆಗುಂಬೆ ಕಡೆಗೆ ಹೋಗುತ್ತಿರುವ ಸಂದರ್ಭ ರಿಕ್ಷಾವನ್ನು ಓವರ್‌ಟೇಕ್ ಮಾಡಿ ಆಗುಂಬೆಯಿಂದ ಹೆಬ್ರಿ ಕಡೆಗೆ ಬರುತ್ತಿದ್ದ ಸರ್ಕಾರಿ ಬಸ್ಸಿಗೆ ಡಿಕ್ಕಿಯಾಗಿದೆ. ಅಪಘಾತದಿಂದ ಶಾಂತಮ್ಮ(77) ಎಂಬುವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net