ಈತನಿಗಿಲ್ಲ ಹ್ಯಾಪಿ ನ್ಯೂ ಇಯರ್: ಗಾಂಜಾ ಸಪ್ಲೈ ಮಾಡಲು ಬಂದು ಸಿಕ್ಕಿಬಿದ್ದ ಟಾಪ್ ಪೆಡ್ಲರ್​, 30 ಕೆ.ಜಿ. ಮಾದಕವಸ್ತು ವಶ..

Ganja
Published on

ಬೆಂಗಳೂರು: ವರ್ಷಾಂತ್ಯದ ಕೊನೆಯ ದಿನದಂದು ಅದೆಷ್ಟೋ ಮಂದಿಯ ಹೊಸ ವರ್ಷದ ಸಂಭ್ರಮಾಚರಣೆಯನ್ನು ಖುಷಿಯ ಉತ್ತುಂಗಕ್ಕೆ ಏರಿಸಲೆಂದೇ ಬಂದಿದ್ದವನ ಪಾಲಿಗೇ ಹ್ಯಾಪಿ ನ್ಯೂ ಇಯರ್ ಇಲ್ಲ ಎಂಬಂತಾಗಿದೆ.

ಹೌದು.. ಹೊಸ ವರ್ಷದ ಸಂಭ್ರಮಾಚರಣೆ ಸಲುವಾಗಿ ಗಾಂಜಾ ಸಪ್ಲೈ ಮಾಡಲು ಬಂದಿದ್ದ ಒಡಿಶಾ ಮೂಲದ ಟಾಪ್ ಪೆಡ್ಲರ್ ಪೊಲೀಸರ ಕೈಗೆ ಗಾಂಜಾ ಸಮೇತ ಸಿಕ್ಕಿಬಿದ್ದಿದ್ದಾನೆ. ಬಂಧಿತ ಗಾಂಜಾ ಪೆಡ್ಲರ್​ನ ಹೆಸರು ಸತ್ಯಪ್ರಧಾನ್​. ಈತನನ್ನು ಬೆಂಗಳೂರಿನ ಇಂದಿರಾನಗರ ಪೊಲೀಸರು ಬಂಧಿಸಿದ್ದಾರೆ.

ಈತ ಒಡಿಶಾದಿಂದ ಗಾಂಜಾ ತಂದು ಬೆಂಗಳೂರಿನ ಸ್ಥಳೀಐ ಪೆಡ್ಲರ್​ಗಳಿಗೆ ಮಾರಾಟ ಮಾಡ್ತಿದ್ದ. ಹದಿನೈದು ದಿನಗಳ ಹಿಂದಷ್ಟೇ 50 ಕೆ.ಜಿ. ಗಾಂಜಾದೊಂದಿಗೆ ಹೊಸಕೋಟೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ ಈತ ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ.

ಆದರೆ ಈ ಆರೋಪಿ ಅದಾಗಿ ಒಂದೇ ವಾರಕ್ಕೆ ಮತ್ತೆ ಗಾಂಜಾ ಮಾರಾಟಕ್ಕೆ ಬಂದಿದ್ದು, ಈ ಸಲ ಇಂದಿರಾನಗರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈತನಿಂದ 30 ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net