ದೇವರನ್ನು ನಂಬಿ ಮುನ್ನಡೆದರೆ ಯಶಸ್ಸು ಪ್ರಾಪ್ತಿ

sharadothsava
ಗಂಗೊಳ್ಳಿ ಸಾರ್ವಜನಿಕ ಶಾರದೋತ್ಸವ ಸಮಿತಿ ಸುವರ್ಣ ಮಹೋತ್ಸವ ಅಂಗವಾಗಿ ಭಾನುವಾರ ಧಾರ್ಮಿಕ ಸಭೆಯನ್ನು ಅಕ್ಷಯ ಗೋಖಲೆ ಉದ್ಘಾಟಿಸಿದರು.
Published on

ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ

ಹಣ, ಅಂತಸ್ತಿನಿಂದ ದೇವರ ಸಾಕ್ಷಾತ್ಕಾರವಾಗುವುದಿಲ್ಲ. ದೇವರ ಮೇಲೆ ಶ್ರದ್ಧೆ, ನಂಬಿಕೆ ಇಟ್ಟು ಮುನ್ನಡೆದರೆ ಯಶಸ್ಸು ಪ್ರಾಪ್ತಿಯಾಗುತ್ತದೆ. ಸಮಾಜಕ್ಕೆ ಪೂರಕ ಕಾರ್ಯ ಮಾಡುವಂತೆ ಮಕ್ಕಳನ್ನು ಪ್ರೇರೇಪಿಸಬೇಕು ಎಂದು ವಾಗ್ಮಿ ಅಕ್ಷಯ ಗೋಖಲೆ ಹೇಳಿದರು. ಗಂಗೊಳ್ಳಿ ಸಾರ್ವಜನಿಕ ಶಾರದೋತ್ಸವ ಸಮಿತಿಯ ಸುವರ್ಣ ಮಹೋತ್ಸವ-2024 ಅಂಗವಾಗಿ ಗಂಗೊಳ್ಳಿಯ ಸ.ವಿ. ಪದವಿಪೂರ್ವ ಕಾಲೇಜಿನ ವಠಾರದಲ್ಲಿ ಭಾನುವಾರ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕುಂದಾಪುರ ಶ್ರೀ ನಾರಾಯಣಗುರು ಮಹಿಳಾ ಸೊಸೈಟಿ ಅಧ್ಯಕ್ಷೆ ಗುಣರತ್ನ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿ ಕಾರ್ಕಳದ ಉದ್ಯಮಿ ಶ್ರದ್ಧಾ ಅನಂತರಾಮ ಭಟ್ ಮತ್ತು ಮೊನಿಷಾ ದೇವಾಡಿಗ ಗಂಗೊಳ್ಳಿ ಶುಭ ಹಾರೈಸಿದರು. ಸಮಿತಿ ಗೌರವಾಧ್ಯಕ್ಷ ಬಿ.ಲಕ್ಷ್ಮೀಕಾಂತ ಮಡಿವಾಳ, ಕಾರ್ಯದರ್ಶಿ ಶ್ರೀಧರ ಎನ್.ಸಕ್ಲಾತಿ ಉಪಸ್ಥಿತರಿದ್ದರು. ಪ್ರೇಮಾ ಸಿ.ಪೂಜಾರಿ ಸ್ವಾಗತಿಸಿದರು. ಸವಿತಾ ಯು.ದೇವಾಡಿಗ ಪ್ರಸ್ತಾವನೆಗೈದರು. ಅನಿತಾ ಎನ್., ಸ್ವಾತಿ, ಸಖು ಉದಯ ಜಿ., ಜಯಂತಿ ಮತ್ತು ಅನುಸೂಯ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಸುಜಾತಾ ಬಾಬು ಖಾರ್ವಿ ವಂದಿಸಿದರು. ಸುಂದರ ಜಿ. ಕಾರ್ಯಕ್ರಮ ನಿರೂಪಿಸಿದರು.

ಸಹಾಯಧನ ವಿತರಣೆ

ದಿ.ಜಿ.ನಾರಾಯಣ ವಿಶ್ವನಾಥ ಆಚಾರ್ಯ ಸ್ಮರಣಾರ್ಥ ಸೇವಾ ಸಂಕಲ್ಪ ಕಾರ್ಯಕ್ರಮದ ಅಂಗವಾಗಿ ಅರ್ಹ ಬಡ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಿಸಲಾಯಿತು. ಊರಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಹಾಗೂ ದಾನಿಗಳನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net