

ಬೆಂಗಳೂರು: ಅಕ್ಷರನಾದ ಕಲೆ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಹಾಗೂ ಚೇತನ ಫೌಂಡೇಶನ್ ವತಿಯಿಂದ ಮಂಗಳವಾರ ಕನ್ನಡ ಸಾಹಿತ್ಯ ಪರಿಷತ್ನ ಅಕ್ಕಮಹಾದೇವಿ ಸಭಾಂಗಣದಲ್ಲಿ ಗಣರಾಜ್ಯೋತ್ಸವ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತೆ ಪೂರ್ಣಿಮಾ ಡಾ.ನಾಗರಾಜ ಅವರಿಗೆ ಗಾಂಧಿ-ಅಂಬೇಡ್ಕರ್ ಸದ್ಭಾವನಾ ಸಮಾಜ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಕವಿಗೋಷ್ಠಿ, ಹಾಗೂ ಸಂವಾದ ಕಾಯರ್ಕ್ರಮ ನಡೆಯಿತು. ಸಾಹಿತಿಗಳಾದ ಸತೀಶ್ ಜವರೇಗೌಡ, ಡಾ. ಲಕ್ಷ್ಮೀ ದೇವಿ, ಸುವರ್ಣ ಕರ್ನಾಟಕ ಕಾರ್ಯಕರ್ತರ ಸಂದ ರಾಜ್ಯಾಧ್ಯಕ್ಷ ಡಾ.ಜಿ.ಶಿವಣ್ಣ, ಚಲನಚಿತ್ರ ನಿರ್ದೇಶಕ ಲೋಕೇಶ್, ಸಾಮಾಜಿಕ ಜಾಲತಾಣ ತಜ್ಱ ಡಾ. ರಾಜೇಶ್ ನಾಯಕ, ಕವಿಯತ್ರಿ ಸಿ.ಎಂ.ಜ್ಯೋತಿ, ಚೇತನ ಫೌಂಡೇಶನ್ ಅಧ್ಯಕ್ಷ ಡಾ.ಚಂದ್ರಶೇಖರ್ ಮಾಡಲಗಿರಿ, ಅಕ್ಷರನಾದ ಫೌಂಡೇಶನ್ ಅಧ್ಯಕ್ಷೆ ಶ್ರುತಿ ಮಧುಸೂದನ್ ಮತ್ತಿತರರಿದ್ದರು.