More

    ನಮ್ಮ ಮೆಟ್ರೋ ಕ್ಯೂಆರ್​ ಕೋಡ್​ ಟಿಕೆಟ್​ಗೆ ಹೆಚ್ಚಿದ ಡಿಮ್ಯಾಂಡ್!

    ಬೆಂಗಳೂರು: ಡಿಜಿಟಲ್​ ಪಾವತಿ ಮೂಲಕ ಟಿಕೆಟ್​ ಪಡೆದುಕೊಂಡು ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುತ್ತಿರುವ ಪ್ರಯಾಣಿಕರ ಸಂಖ್ಯೆ ಏರಿಕೆಯಾಗುತ್ತಿದೆ. ಇದರಿಂದ ಸಹಜವಾಗಿಯೇ ಬೆಳಗ್ಗೆ ಸಂಜೆಯ ಹೊತ್ತಿನಲ್ಲಿ ಟಿಕೆಟ್​ ಕೌಂಟರ್​ಗಳ ಮುಂಭಾಗ ಉಂಟಾಗುತ್ತಿದ್ದ ಜನದಟ್ಟಣೆ ಕಡಿಮೆಯಾಗುತ್ತಿದೆ.

    ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ಹಾಗೂ ಟಿಕೆಟ್​ ಕೌಂಟರ್​ಗಳಲ್ಲಿ ಉಂಟಾಗುವ ಸರತಿ ಸಾಲನ್ನು ತಪ್ಪಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ 2022 ನವೆಂಬರ್​ನಲ್ಲಿ ಕ್ಯೂಆರ್​ ಕೋಡ್​ ಟಿಕೆಟ್​ ಸೌಲಭ್ಯವನ್ನು ಪರಿಚಯಿಸಿತ್ತು. ಇದೀಗ ಕಳೆದ ಡಿಸೆಂಬರ್​ನಲ್ಲಿ 25.9 ಲಕ್ಷ ಜನರು ಕ್ಯೂಆರ್​ ಕೋಡ್​ ಟಿಕೆಟ್​ ಪಡೆದುಕೊಂಡು ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ.

    ಸದ್ಯ ಮೆಟ್ರೋದಲ್ಲಿ ನಿತ್ಯ 6.5 ಲಕ್ಷದಷ್ಟು ಮಂದಿ ಸಂಚರಿಸುತ್ತಿದ್ದು, 1 ಲಕ್ಷದಷ್ಟು ಪ್ರಯಾಣಿಕರು ಕ್ಯೂಆರ್​ ಕೋಡ್​ ಟಿಕೆಟ್​ ಪಡೆದುಕೊಳ್ಳುತ್ತಿದ್ದಾರೆ. ಕಳೆದ ನವೆಂಬರ್​ನಲ್ಲಿ 18.7 ಲಕ್ಷ ಹಾಗೂ ಅಕ್ಟೋಬರ್​ನಲ್ಲಿ 16.9 ಲಕ್ಷ ಜನರು ಕ್ಯೂಆರ್​ ಕೋಡ್​ ಟಿಕೆಟ್​ ಬಳಸಿದ್ದಾರೆ.

    ಕ್ಯೂಆರ್​ ಕೋಡ್​ ಟಿಕೆಟ್​ನ್ನು ಪ್ರಯಾಣಿಕರು ವಾಟ್ಸ್​ಆ್ಯಪ್​, ನಮ್ಮ ಮೆಟ್ರೋ ಮೊಬೈಲ್​ ಆ್ಯಪ್​, ಪೇಟಿಎಂ, ಅಮೆಜಾನ್​ ಪೇ ಮುಖಾಂತರ ಪಡೆದುಕೊಳ್ಳಬಹುದು. ಜತೆಗೆ ಗ್ರೂಪ್​ ಟಿಕೆಟ್​ಗಳನ್ನು ಕೂಡ ಪಡೆಯಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts