More

    ಮಾನವೀಯತೆ ಮರೆತು ಬಿಟ್ರಾ ಮೆಟ್ರೋ ಸಿಬ್ಬಂದಿ: ಕಾರ್ಮಿಕನನ್ನು ಮೆಟ್ರೋದೊಳಗೆ ಬಿಡದೆ ಅವಮಾನ

    ಬೆಂಗಳೂರು: ಯುಗಾದಿ ಹಬ್ಬದ ದಿನದಂದು ಮತ್ತೆ ಮಾನವೀಯತೆ ಮರೆತು ಬಿಟ್ರಾ ನಮ್ಮ‌ ಮೆಟ್ರೋ ಸಿಬ್ಬಂದಿ? ಎಂಬ ಪ್ರಶ್ನೆ ಎದ್ದಿದೆ. ಬಟ್ಟೆ ಸರಿಯಿಲ್ಲ ಅಂತ ನಮ್ಮ ಮೊಟ್ರೋ ಸಿಬ್ಬಂದಿ ಕಾರ್ಮಿಕನನ್ನು ತಡೆದು ನಿಲ್ಲಿಸಿ ಅಪಮಾನಿಸಿದ ಘಟನೆ ದೊಡ್ಡಕಲ್ಲಸಂದ್ರ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ.

    ಇದನ್ನೂ ಓದಿ: ಮುಸ್ಲಿಮರಿಗೆ ತೊಂದರೆ ಕೊಟ್ರೆ ಇಡೀ ದೇಶನೇ ಸುಟ್ಟು ಹಾಕ್ತೀವಿ: ಬಿಜೆಪಿ ಸಚಿವರಿಗೆ ಬೆದರಿಕೆ

    ನಮ್ಮ ಮೆಟ್ರೋ ಸಿಬ್ಬಂದಿ ನಡೆಗೆ ಎಕ್ಸ್ ನಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಸಂಸದ ತೇಜಸ್ವಿ ಸೂರ್ಯಗೆ ಟ್ಯಾಗ್ ಮಾಡಿ ಕ್ರಮಕ್ಕೆ ಆಗ್ರಹಿಸಲಾಗಿದೆ.
    ಇತ್ತೀಚೆಗಷ್ಟೇ ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ ಮೆಟ್ರೋ ಸಿಬ್ಬಂದಿಯಿಂದ ದೇಶದ ಬೆನ್ನೆಲುಬು ರೈತನಿಗೆ ಮಾಡಲಾಗಿತ್ತು. ಬಟ್ಟೆ ಕೊಳಕು ಆಗಿದೆ ಎಂಬ ಕಾರಣಕ್ಕೆ ಅನ್ನದಾತನನ್ನು ಮೆಟ್ರೋ ಒಳಗೆ ಬಿಡದೆ ಸಿಬ್ಬಂದಿ ಅವಮಾನ ಮಾಡಿದ್ದರು. ಇಂತಹದ್ದೇ ಪ್ರಕರಣ ಯುಗಾದಿ ಹಬ್ಬದ ದಿನ ನಡೆದಿದ್ದು ಮೆಟ್ರೋ ಸಿಬ್ಬಂದಿ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿದೆ.

    ರೈತನಿಗೆ ಅವಮಾನಿಸಿದ ಬಳಿಕ ಬಡ ಕೂಲಿ ಕಾರ್ಮಿಕನಿಗೆ ಮೆಟ್ರೋದಲ್ಲಿ ಅವಮಾನ ಮಾಡಿದ್ದಾರೆ. ಬಟ್ಟೆ ಸರಿಯಿಲ್ಲವೆಂದು ವ್ಯಕ್ತಿಯೊಬ್ಬರಿಗೆ ಮೆಟ್ರೋ ಸಿಬ್ಬಂದಿ ನಿಲ್ದಾಣದ ಒಳಗೆ ಬಿಡಲು ನಿರಾಕರಿಸಿಲಾಗಿದೆ.

    ಮಾನವೀಯತೆ ಮರೆತು ಬಿಟ್ರಾ ಮೆಟ್ರೋ ಸಿಬ್ಬಂದಿ: ಕಾರ್ಮಿಕನನ್ನು ಮೆಟ್ರೋದೊಳಗೆ ಬಿಡದೆ ಅವಮಾನ

    ದೊಡ್ಡಕಲ್ಲಸಂದ್ರ ಮೆಟ್ರೋ ನಿಲ್ದಾಣಕ್ಕೆ ಕಾರ್ಮಿಕನೊಬ್ಬ ಆಗಮಿಸಿದ್ದ ಈ ವೇಳೆ ತನ್ನ ಶರ್ಟ್​ಗೆ ಗುಂಡಿ ಇಲ್ಲದ ಕಾರಣ ಕೂಲಿ ಕಾರ್ಮಿಕನನ್ನು ತಡೆದು ನಿಲ್ಲಿಸಿದ್ದಾರೆ ಎಂಬ ಆರೋಪ ಬಂದಿದೆ. ಶರ್ಟ್ ನ ಗುಂಡಿಯನ್ನ ಹಾಕಿಕೊಂಡು ನೀಟಾಗಿ ಬಾ ಇಲ್ಲದಿದ್ರೆ ಎಂಟ್ರಿ ಕೊಡಲ್ಲ ಎಂದ ಮೆಟ್ರೋ ಸಿಬ್ಬಂದಿ ಜೋರು ಮಾತಿನಿಂದ ಗದರಿಸಿದ್ದಾರೆ ಆರೋಪ ಕೇಳಿಬಂದಿದೆ.

    ಮೆಟ್ರೋ ಸಿಬ್ಬಂದಿಯ ಅತಿರೇಕದ ವರ್ತನೆಗೆ ಎಕ್ಸ್ ನಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಸಂಸದ ತೇಜಸ್ವಿ ಸೂರ್ಯಗೆ ಟ್ಯಾಗ್ ಮಾಡಿ ಕ್ರಮಕ್ಕೆ ಆಗ್ರಹಿಸಲಾಗಿದೆ.

    ರಾಜಕೀಯ ನಿವೃತ್ತಿ ಘೋಷಿಸಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts