More

    ರಾಜಕೀಯ ನಿವೃತ್ತಿ ಘೋಷಿಸಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್!

    ಶ್ರೀನಿವಾಸಪುರ: ಮುಂಬರುವ ವಿಧಾನಸಭಾ ಚುನಾವಣೆಗೆ ನಿಲ್ಲುವುದಿಲ್ಲ. ಗೌರವಯುತವಾಗಿ ಸಕ್ರಿಯ ರಾಜಕಾರಣದಿಂದ ನಿವೃತ್ತಿನಾಗುತ್ತೇನೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ತಮ್ಮ ರಾಜಕೀಯ ನಿವೃತ್ತಿಯನ್ನು ಘೋಷಿಸಿದರು.

    ಇದನ್ನೂ ಓದಿ: ಅಶ್ವಿನಿ ಪುನೀತ್​​ರಾಜ್​ಕುಮಾರ್​ ಬೆಂಬಲಕ್ಕೆ ನಿಂತ ನಟ ಜಗ್ಗೇಶ್; ನೇರವಾಗಿ ಇವರ ವಿರುದ್ಧ ಆಕ್ರೋಶ 

    ಹುಟ್ಟೂರು ಶ್ರೀನಿವಾಸಪುರ ತಾಲ್ಲೂಕು ಅಡ್ಡಗಲ್​ ಗ್ರಾಮದಲ್ಲಿ ಭಾನುವಾರ ನಡೆದ ಕೋಲಾರ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ.ವಿ.ಗೌತಮ್​ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದರು. ರಾಜ್ಯದಲ್ಲಿ ರಾಜಕೀಯ ವ್ಯವಸ್ಥೆಯೇ ಕಲುಷಿತಗೊಂಡಿದೆ. ರಾಜಕಾರಣದಲ್ಲಿ ಮೌಲ್ಯಗಳು ಉಳಿದಿಲ್ಲ. ರಾಜಕೀಯ ಜೀವನದಲ್ಲಿ ಇಷ್ಟು ವರ್ಷ ನ್ಯಾಯಯುತವಾಗಿ ಬದುಕಿದ್ದೇನೆ ಎಂದು ತಿಳಿಸಿದರು.

    ಹಣ ಪಡೆದು ರಾಜಕೀಯ ಮಾಡಿಲ್ಲ. ಪಕ್ಷದ ಕೆಲವರು ಹಣಕ್ಕೆ ತಲೆ ಮಾರಿಕೊಂಡು ನನೆಗೆ ಮೋಸ ಮಾಡಿ ಸೋಲಿಸಿದರು. ತಾಯಿಯಂತಿರುವ ಪಕ್ಷಕ್ಕೆ ದ್ರೋಹ ಮಾಡಿದರು. ಅಧಿಕಾರದಾಸೆಗೆ ಅನೈತಿಕ ರಾಜಕಾರಣ ಮಾಡುತ್ತಿದ್ದಾರೆ. ಅವರು ಸರ್ವನಾಶವಾಗುತ್ತಾರೆ. ಆದರೆ ತಾನು ಮುಂಬರುವ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಗೌರವಯುತವಾಗಿ ಸಕ್ರೀಯ ರಾಜಕಾರಣದಿಂದ ನಿವೃತ್ತನಾಗುತ್ತೇನೆ ಎಂದು ಘೋಷಿಸಿದರು.

    ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಮತ ಕೇಳಲು ನಿಮ್ಮ ಮುಂದೆ ಬರುವುದಿಲ್ಲ. ರಮೇಶ್​ ಕುಮಾರ್ ಉತ್ತರಾಧಿಕಾರಿಯಾಗಿ ನನ್ನ ಮಗ ಹರ್ಷ ಕೂಡ ಮತ ಕೇಳಲು ಬರುವುದಿಲ್ಲ ಎಂದು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲು ನೆನಪು ಮಾಡಿಕೊಂಡರು.
    ನನಗೆ ಮೋಸ ಮಾಡಿದವರಿಗೆ ಎಂತಹ ಸ್ಥಿತಿ ಬರಲಿದೆ ಕಾದು ನೋಡಿ ಎಂದು ಹೇಳುವ ಮೂಲಕ ತಮ್ಮ ಸೋಲಿನ ಕಹಿ ಘಟನೆ ನನೆದು ಭಾವುಕರಾಗಿ ಮಾತನಾಡಿದರು.

    ಕಾಂಗ್ರೆಸ್​ ಅಭ್ಯರ್ಥಿ ಪರ ಮತ ಕೇಳುವುದಿಲ್ಲ: ಕೋಲಾರ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಲ್ಲಿ ಪಕ್ಷದ ಟಿಕೆಟ್‌ಗಾಗಿ ರಂಪಾಟ ನಡೆಸಿದ್ದ ಸಚಿವ ಕೆ.ಎಚ್‌.ಮುನಿಯಪ್ಪ ಹಾಗೂ ಮಾಜಿ ಸ್ಪೀಕರ್‌ ಕೆ.ಆರ್‌. ರಮೇಶ್‌ಕುಮಾರ್‌ ಎರಡೂ ಬಣಗಳನ್ನು ಬದಿಗೆ ಸರಿಸಿದ ಎಐಸಿಸಿ ಹೈಕಮಾಂಡ್‌, ಹೊಸ ಮುಖ ಕೆ.ವಿ.ಗೌತಮ್‌ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿತ್ತು. ಜಿಲ್ಲೆಯ ನಾಯಕರ ನಡುವಿನ ಕಾಲೆಳೆದಾಟದಲ್ಲಿ ಎರಡೂ ಗುಂಪಿಗೆ ಸಂಬಂಧವಿಲ್ಲದ ಯುವ ಮತ್ತು ಉತ್ಸಾಹಿ ಗೌತಮ್‌ಗೆ ಟಿಕೆಟ್‌ ಅದೃಷ್ಟ ಒಲಿದಿದೆ.

    ಕೋಲಾರ ಲೋಕಸಭೆ ಕಾಂಗ್ರೆಸ್​ ಅಭ್ಯರ್ಥಿ ಕೆ.ವಿ ಗೌತಮ್​ ಪರ ನಾನು ಮತ ಕೇಳಲು ಬರುವುದಿಲ್ಲ. ನಾನು ಮಾಡಿರುವ ಅಭಿವೃದ್ಧಿ ಕೆಲಸವನ್ನು ನೋಡಿ ಮತ ಅವರಿಗೆ ಹಾಕಲಿ ಎಂದು ಹೇಳಿದರು.

    ಗಜಪಡೆಯ ಕೀಳು ಮಟ್ಟದ ಪೋಸ್ಟ್‌ ವಿಚಾರಕ್ಕೆ ಸ್ಟ್ರಾಂಗ್ ಕೌಂಟರ್ ಕೊಟ್ಟ ಆ್ಯಂಕರ್ ಅನುಶ್ರೀ! ಏನಿದೆ ಪೋಸ್ಟ್​ನಲ್ಲಿ ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts