ಸಮುದಾಯ ಒಗ್ಗೂಡಿಸುವ ಕಾರ್ಯ: ಸುಬ್ರಾಯ ನಾಯ್ಕ ಟಿ. ಬಣ್ಣನೆ

Bdk_samudaya
ಹಿರಿಯ ಕೃಷಿಕ ಕುಂಞ್ಞಪ್ಪ ನಾಯ್ಕ ಓಣಿಯಡ್ಕ ಕಾರ್ಯಕ್ರಮ ಉದ್ಘಾಟಿಸಿದರು. ಸುಬ್ರಾಯ ನಾಯ್ಕ ಟಿ, ಗಂಗಾಧರ ನಾಯ್ಕ ಓಣಿಯಡ್ಕ ಮೊದಲಾದವರಿದ್ದರು.
Published on

ಬದಿಯಡ್ಕ: ಕೆಸರುಗದ್ದೆ ಕ್ರೀಡಾಕೂಟದ ಮೂಲಕ ಸಮುದಾಯ ಒಗ್ಗೂಡಿಸುವ ಕಾರ್ಯ ನಡೆದಿದೆ ಎಂದು ಕೇರಳ ಮರಾಟಿ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಸುಬ್ರಾಯ ನಾಯ್ಕ ಟಿ. ಹೇಳಿದರು.

ಕೇರಳ ಮರಾಟಿ ಸಂರಕ್ಷಣಾ ಸಮಿತಿ ಬದಿಯಡ್ಕ ಪಂಚಾಯಿತಿ ಸಮಿತಿ ನೇತೃತ್ವದಲ್ಲಿ ನೀರ್ಚಾಲು ಓಣಿಯಡ್ಕ ಕೆಸರು ಗದ್ದೆಯಲ್ಲಿ ಭಾನುವಾರ ಜರುಗಿದ ‘ಗದೇಂತ್ ಏಕ್ ದೀಸ್’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೆಎಂಎಸ್‌ಎಸ್ ಬದಿಯಡ್ಕ ಪಂಚಾಯಿತಿ ಸಮಿತಿ ಅಧ್ಯಕ್ಷ ಗಂಗಾಧರ ನಾಯ್ಕ ಓಣಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ಸರ್ಕಾರಿ ಐಟಿಐ ಜೂನಿಯರ್ ಟ್ರೈನಿಂಗ್ ಆಫೀಸರ್ ಯೋಗೀಶ್ ಪಿ. ಮಾತನಾಡಿದರು.

ಡಾ.ಜನಾರ್ದನ ನಾಯ್ಕ, ಶ್ಯಾಮಪ್ರಸಾದ ಮಾನ್ಯ, ನಾರಾಯಣ ನಾಯ್ಕ ಅಡ್ಕಸ್ಥಳ, ಕೃಷ್ಣ ನಾಯ್ಕ, ಬಾಲಕೃಷ್ಣ ನಾಯಡ್ಕ, ಮಾಹಿಲ ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಾಜದ ಹಿರಿಯ ಕೃಷಿಕರು ಹಾಗೂ ನಿವೃತ್ತ ಸೇನಾನಿಗಳನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಗೋಪಾಲಕೃಷ್ಣ ಬದಿಯಡ್ಕ ಸ್ವಾಗತಿಸಿದರು. ಬಾಲಕೃಷ್ಣ ಅಚ್ಚಾಯಿ ವಂದಿಸಿದರು. ಬೆಳಗ್ಗೆ ಹಿರಿಯ ಕೃಷಿಕ ಕುಂಞ್ಞಪ್ಪ ನಾಯ್ಕ ಓಣಿಯಡ್ಕ ಧ್ವಜಾರೋಹಣಗೈದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net