

ಬೆಳ್ತಂಗಡಿ: ಕರ್ನಾಟಕ ಯೋಗಾಸನ ಕ್ರೀಡಾ ಸಂಘ, ಜಿಲ್ಲಾ ಯೋಗಾಸನ ಕ್ರೀಡಾ ಸಂಘ, ಸ್ನೇಹಮಯಿ ವಿವೇಕಾನಂದ ಯೋಗ ಕೇಂದ್ರ ಕಡೂರು, ಡಾ.ರಾಜ್ ಸಂಘ ಮತ್ತು ಪತ್ರಿಕೆಯೊಂದರ 35ನೇ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ಕಡೂರಿನಲ್ಲಿ ನಡೆದ ನಾಲ್ಕನೇ ರಾಜ್ಯಮಟ್ಟದ ಯೋಗಾಸನ ಕ್ರೀಡಾ ಚಾಂಪಿಯನ್‌ಷಿಪ್ ಮತ್ತು ಒಂದನೇ ರಾಜ್ಯಮಟ್ಟದ ನಾನ್ ಮೆಡಲಿಸ್ಟ್ ಯೋಗ ಚಾಂಪಿಯನ್‌ಷಿಪ್‌ನಲ್ಲಿ ವಾಣಿ ಪದವಿ ಪೂರ್ವ ಕಾಲೇಜಿನ ಮೋಹಿತ್ ನಾನ್ ಮೆಡಲಿಸ್ಟ್‌ನಲ್ಲಿ ಪ್ರಥಮ ಸ್ಥಾನ ಹಾಗೂ ಬಾಲಕರ ಟ್ರೆಡಿಷನಲ್ ಜೂನಿಯರ್‌ನಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.