ಸಾಧನೆಗೆ ಇರಲಿ ಸ್ಪಷ್ಟ ಗುರಿ : ಭಾರತಿ ಜಿ. ಸಲಹೆ

New Project (18)
Published on

ಗುರುಪುರ: ಒಂದು ಗುರಿ ಮತ್ತು ಉದ್ದೇಶವಿಟ್ಟುಕೊಂಡು ಮಕ್ಕಳು ಸಾಧನೆ ಹಾದಿಯಲ್ಲಿ ಮುನ್ನಡೆಯಬೇಕು. ದುರ್ವರ್ತನೆ, ದುಶ್ಚಟಗಳಿಂದ ದೂರವಾಗಿರಬೇಕು ಎಂದು ಲೋಕಾಯುಕ್ತ ಮಂಗಳೂರು ಪೊಲೀಸ್ ನಿರೀಕ್ಷಕಿ ಭಾರತಿ ಜಿ. ಹೇಳಿದರು.

ಕೋಡಿಕಲ್‌ನ ಬಾಬು ಜಗಜೀವನ್‌ರಾಂ ಸೇವಾ ಸಂಘದಲ್ಲಿ ಮಂಗಳೂರಿನ ಸನ್ಮತಿ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಮಕ್ಕಳಿಗಾಗಿ ಮೇ 12ರಿಂದ 16ರವರೆಗೆ ನಡೆಯುವ ಉಚಿತ ಶೈಕ್ಷಣಿಕ ಶಿಬಿರ ಉದ್ಘಾಟಿಸಿ ಸೋಮವಾರ ಮಾತನಾಡಿದರು.

ಮಂಗಳೂರು ಮಾಜಿ ಮೇಯರ್ ಮನೋಜ್ ಕುಮಾರ್ ಮಾತನಾಡಿ, ಮಕ್ಕಳು ತಮ್ಮ ಬೆಳವಣಿಗೆಗೆ ಮೆಟ್ಟಿಲಾಗಿ ಉಚಿತ ಶೈಕ್ಷಣಿಕ ಶಿಬಿರ ಬಳಸಿಕೊಳ್ಳಬೇಕು. ಎಲ್ಲರೂ ಆಸಕ್ತಿಯಿಂದ ಭಾಗವಹಿಸಿ, ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಉದ್ಯಮಿ ವೆಂಕಟ್ ಮಲ್ಯ, ಯೋಗ ಗುರು ಶೈಲಜಾ, ಸನ್ಮತಿ ಚಾರಿಟೆಬಲ್ ಟ್ರಸ್ಟ್ ಸ್ಥಾಪಕಿ ಕುಶಲಾ ಐ., ಕಾರ್ಯದರ್ಶಿ ಈಶ್ವರ ಪೂಜಾರಿ ಮತ್ತು ಕೌಶಲ್ ಐ., ಶಿಕ್ಷಕಿಯರಾದ ಮಮತಾ ಮತ್ತು ದೀಪಾ, ಟೈಲರಿಂಗ್ ಶಿಕ್ಷಕಿ ಚಂದ್ರಕಲಾ, ಉಪನ್ಯಾಸಕಿ ಶ್ರೀವಿದ್ಯಾ, ಪ್ರಾಧ್ಯಾಪಕಿ ಸುಜಾತಾ, ಆಶಾ ಕಾರ್ಯಕರ್ತೆ ರೇಖಾ, ಮಕ್ಕಳು, ಪಾಲಕರು ಉಪಸ್ಥಿತರಿದ್ದರು. ಕುಶಲಾ ಐ. ಕಾರ್ಯಕ್ರಮ ನಿರೂಪಿಸಿದರು. ಈಶ್ವರ ಪೂಜಾರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net