ಮಂಜೇಶ್ವರ: ಮಾತೃಗಿರಿ ಎಲಿಯಾಣ ದೇರಂಬಳ ಶ್ರೀ ರಾಜರಾಜೇಶ್ವರಿ ಭಜನಾ ಮಂದಿರದ ವಾರ್ಷಿಕೋತ್ಸವ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಿತು.

ಸೂರ್ಯೋದಯದಿಂದ ಸೂರ್ಯಾಸ್ತದ ತನಕ ವಿವಿಧ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ ನಡೆಯಿತು. ರವಿರಾಜ ಬರ್ಲಾಯ ನೇತೃತ್ವದಲ್ಲಿ ಗಣಪತಿ ಹವನ, ಹೂವಿನ ಪೂಜೆ, ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಮಂದಿರಕ್ಕೆ ಭೇಟಿ ನೀಡಿ ಆವರಣ ಚಪ್ಪರ ಲೋಕಾರ್ಪಣೆಗೈದರು.
ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ ಹರಿದಾಸ ಶೇಣಿ ಮುರಳಿ ಅವರಿಂದ ಶರಸೇತು ಬಂಧನ ಹರಿಕಥೆ ಸಂಕೀರ್ತನೆ ನಡೆಯಿತು. ಧಾರ್ಮಿಕ ಸಭೆಯಲ್ಲಿ ಶರತ್ ಕೇಶವ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿದ್ದರು. ಗಂಗಾಧರ ಕೊಂಡೆವೂರು ಧಾರ್ಮಿಕ ಉಪನ್ಯಾಸ ನೀಡಿದರು. ಡಾ.ಎಸ್.ಎನ್.ಭಟ್ ಮೀಯಪದವು, ಪದ್ಮನಾಭ ಚಿಗುರುಪಾದೆ ಅವರನ್ನು ಗೌರವಿಸಲಾಯಿತು. ಮಂದಿರ ನಿರ್ಮಾಣಕ್ಕೆ ಭೂಮಿಯನ್ನು ದಾನ ನೀಡಿದ ದಿ.ಪ್ರೇಮಾ ಕೆ.ಭಟ್ ಅವರಿಗೆ ನುಡಿನಮನ ಸಲ್ಲಿಸಲಾಯಿತು. ಕೆ.ವಿ.ಭಟ್ ಮೀಯಪದವು, ಸರಸ್ವತಿ ಎಲಿಯಾಣ, ಚಂದ್ರಹಾಸ ಶೆಟ್ಟಿ ದೇರಂಬಳ ಉಪಸ್ಥಿತರಿದ್ದರು. ಸತೀಶ್ಚಂದ್ರ ರೈ ಸ್ವಾಗತಿಸಿದರು. ಪವಿತ್ರಾ ಕೆ.ಜಿ. ವಂದಿಸಿದರು. ಲಕ್ಷ್ಮೀಶ ಬೊಳುಂಬು ಕಾರ್ಯಕ್ರಮ ನಿರೂಪಿಸಿದರು.
ರಾಷ್ಟ್ರದಲ್ಲಿ ಶಾಂತಿ ನೆಲೆಸುವುದು ಅಗತ್ಯ – ಶ್ರೀ ಗುರುದಾನಂದ ಸ್ವಾಮೀಜಿ ಸಲಹೆ
ರಂಗಿಕೆರೆ ಅಭಿವೃದ್ಧಿಗೆ ಹಿನ್ನಡೆ!: ಗ್ರಾಪಂ ಹೂಳೆತ್ತಿದ್ದರೂ ನಿರರ್ಥಕ ಬದಿಗೆ ಕಲ್ಲು ಕಟ್ಟಿದರಷ್ಟೇ ಫಲ