ರಾಷ್ಟ್ರದಲ್ಲಿ ಶಾಂತಿ ನೆಲೆಸುವುದು ಅಗತ್ಯ -  ಶ್ರೀ ಗುರುದಾನಂದ ಸ್ವಾಮೀಜಿ ಸಲಹೆ

PTR_14 MAY_3
Published on

ಪುತ್ತೂರು: ದೇಶ ಉಳಿದರೆ ಧರ್ಮ ಉಳಿಯಲು ಸಾಧ್ಯತೆ. ಧರ್ಮವನ್ನು ಉಳಿಸಿಕೊಂಡು ಬರಲು ದೇಶದ ಅಗತ್ಯವಿದೆ. ಗಡಿಯಲ್ಲಿ ಕಾರ್ಮೋಡದ ವಾತಾವರಣವಿದ್ದರೂ, ರಾಷ್ಟ್ರದಲ್ಲಿ ಶಾಂತಿ ನೆಲೆಸುವ ಅಗತ್ಯವಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದಾನಂದ ಸ್ವಾಮೀಜಿ ಹೇಳಿದರು.

ಒಡಿಯೂರು ಶ್ರೀ ಸಂಸ್ಥಾನದಲ್ಲಿ ಸಂಕ್ರಮಣದ ಪ್ರಯುಕ್ತ ನಡೆದ ಸಾಮೂಹಿಕ ಗಾಯತ್ರಿ ಹವನ - ಆಶ್ಲೇಷ ಬಲಿಪೂಜೆಯಲ್ಲಿ ಸಂದಭ ಭಾರತೀಯ ಯೋಧರಿಗೆ ವಿಶೇಷವಾಗಿ ಪ್ರಾರ್ಥನೆ ಸಲ್ಲಿಸಿ ಆಶೀರ್ವಚನ ನೀಡಿದರು.

ದೇಶ, ಕಾಲ, ಸ್ಥಿತಿ ಅರಿತು ಮುಂದುವರಿದಾಗ ಆಡಳಿತಕ್ಕೆ ಶಕ್ತಿ ಬರುತ್ತದೆ. ನಮ್ಮ ಪ್ರಯತ್ನಗಳಿಂದ ಕೆಲಸದಲ್ಲಿ ಯಶಸ್ಸು ಲಭಿಸುತ್ತದೆ. ಅಜ್ಞಾನವನ್ನು ತೊಡೆದು ಹಾಕಲು ಜ್ಞಾನದ ಅಗತ್ಯವಿದೆ. ಅರಿವಿನ ಜತೆಗೆ ಬದುಕುವ ಅನಿವಾರ್ಯತೆಯಿದೆ ಎಂದು ತಿಳಿಸಿದರು. ಕುರುವಮೂಲೆ ಚಂದ್ರಶೇಖರ ಉಪಾಧ್ಯಾಯ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net