ನೆಲದ ಸಂಸ್ಕೃತಿ ಪ್ರೇಮ ಶ್ಲಾಘನೀಯ: ಮಾನ್ಯದಲ್ಲಿ ಎಡನೀರು ಶ್ರೀ ಆಶೀರ್ವಚನ

New Project (6)
Published on

ಬದಿಯಡ್ಕ: ಹೊಸ ಪೀಳಿಗೆಗೂ ನೆಲದ ಸಂಸ್ಕೃತಿ ಪ್ರೇಮ ಮೂಡಿಸಿ ಮಾನ್ಯ ಪರಿಸರದಲ್ಲಿ ಯಕ್ಷಗಾನಾಭಿರುಚಿಯ ಬೀಜ ಬಿತ್ತಿದ ಯಕ್ಷ ಮಿತ್ರರ ಕೊಡುಗೆ ಶ್ಲಾನೀಯ ಎಂದು ಶ್ರೀ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಹೇಳಿದರು.

ಮಾನ್ಯ ಯಕ್ಷ ಮಿತ್ರರು ಸಂಸ್ಥೆಯ 24ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಶನಿವಾರ ಆಶೀರ್ವಚನ ನೀಡಿದರು.

ಹನುಮಗಿರಿ ಮೇಳದ ಕಲಾವಿದರಾದ ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್, ದೇಲಂತಮಜಲು ಸುಬ್ರಹ್ಮಣ್ಯ ಭಟ್, ಸಂತೋಷ್ ಕುಮಾರ್ ಹಿಲಿಯಾಣ ಅವರನ್ನು ದಂಪತಿ ಸಹಿತ ಗೌರವಿಸಲಾಯಿತು. ಅರ್ಥಧಾರಿ ಹರೀಶ ಬಳಂತಿಮೊಗರು ಅಭಿನಂದನಾ ಭಾಷಣ ಮಾಡಿದರು. ಯಕ್ಷಮಿತ್ರರು ವತಿಯಿಂದ ನಿಧಿ ಸಂಚಯನಕ್ಕಾಗಿ ‘ಯಕ್ಷನಿಧಿ’ ಯೋಜನೆ ರೂಪಿಸಲಾಗಿದ್ದು, ಎಡನೀರು ಶ್ರೀಗಳು ಉದ್ಘಾಟಿಸಿದರು.

ಪಹಲ್ಗಾಮ್ ಆಕ್ರಮಣ ಮತ್ತು ಗಡಿ ಉದ್ವಿಗ್ನತೆಯಲ್ಲಿ ಬಲಿದಾನಗೈದ ಭಾರತೀಯರ ಗೌರವಾರ್ಥ ನುಡಿನಮನ ಸಲ್ಲಿಸಲಾಯಿತು. ನಿತ್ಯಾನಂದ ಮಾನ್ಯ, ರಾಮ ಕಾರ್ಮಾರು, ಸೂರ್ಯ ಮಾನ್ಯ, ಪುರುಷೋತ್ತಮ, ಮಹೇಶ್ ಸಹಕರಿಸಿದರು. ಸುಂದರ ಶೆಟ್ಟಿ ಕೊಲ್ಲಂಗಾನ ಸ್ವಾಗತಿಸಿದರು. ಚಿತ್ರಾ ವಿಜಯಕುಮಾರ್, ಹರ್ಷಿತಾ ಪುರುಷೋತ್ತಮ, ಶಾಲಿನಿ ಮಹೇಶ್ ಸವ್ಮಾನ ಪತ್ರ ವಾಚಿಸಿದರು. ಸಂತೋಷ್ ಕುಮಾರ್ ಮಾನ್ಯ ನಿರೂಪಿಸಿದರು. ವಿಜಯ ಕುಮಾರ್ ವಂದಿಸಿದರು. ಹನುಮಗಿರಿ ಮೇಳದಿಂದ ‘ಸಾಕೇತ ಸಾಮ್ರಾಜ್ಞೆ’ ಪ್ರದರ್ಶನಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net