

ವಿಜಯವಾಣಿ ಸುದ್ದಿಜಾಲ ಕೊಕ್ಕಡ
ಬೆಳ್ತಂಗಡಿ ತಾಲೂಕಿನ ಶಿಶಿಲದ ಶ್ರೀ ಶಿಶಿಲೇಶ್ವರ ದೇವಸ್ಥಾನದಲ್ಲಿ ಕೆಮ್ಮಿಂಜೆ ನಾಗೇಶ ತಂತ್ರಿ ನೇತೃತ್ವದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ ಮಂಗಳವಾರ ಆರಂಭಗೊಂಡಿದ್ದು, ಮೇ 21ರವರೆಗೆ ಜರುಗಲಿದೆ.
13ರಂದು ರಾತ್ರಿ ವಾಸ್ತು ಬಲಿ, ವಾಸ್ತು ರಕ್ಷೋಘ್ನ ಹೋಮ, ವಾಸ್ತು ಪೂಜೆ, ಕಿಲಮರಿತ್ತಾಯ ನೇಮ, ಧ್ವಜಾರೋಹಣ, 14ರಂದು ಬೆಳಗ್ಗೆ ಪುಣ್ಯಾಹ, ಶಾಂತಿ ಹವನ, 12 ಕಾಯಿ ಗಣಪತಿ ಯಾಗ, ರಾತ್ರಿ ಜೋಡು ನೇಮ, ಕುದುರೆಮುಖ ದೈವದ ನೇಮ, ಉಗ್ರಾಣ ತುಂಬಿಸುವುದು, ಅಂಕುರಾರ್ಪಣೆ, ದೇವರ ಉತ್ಸವ ಪ್ರಾರಂಭ, ಅಶ್ವತ್ಥಕಟ್ಟೆ ಪೂಜೆ ನೆರವೇರಿತು.
15ರಂದು ಪೂರ್ವಾಹ್ನ ಅಂಗಣೋತ್ಸವ, ರಾತ್ರಿ ದೇವರ ಉತ್ಸವ, ಬೆಳ್ಳಿಕಟ್ಟೆ ಪೂಜೆ, 16ರಂದು ಬೆಳಗ್ಗೆ ಅಂಗಣೋತ್ಸವ ರಾತ್ರಿ ಉತ್ಸವ, ಸವಾರಿ ಮಂಟಪ, ಕಟ್ಟೆ ಪೂಜೆ, ಶಿಶಿಲ ಶ್ರೀ ಶಿಶಿಲೇಶ್ವರ ಯಕ್ಷಕಲಾ ಕೂಟ ಸಹಭಾಗಿತ್ವದಲ್ಲಿ ಹಾಸ್ಯ ವೈಭವ, 17ರಂದು ಅಂಗಣೋತ್ಸವ, ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ, ರಾತ್ರಿ ಅಂಗಣೋತ್ಸವ, ಬಂಗರ ಕಟ್ಟೆ ಪೂಜೆ, ರಾತ್ರಿ ಶಿಶಿಲ ಶ್ರೀ ಶಿಶಿಲೇಶ್ವರ ಮಹಿಳಾ ಮತ್ತು ಮಕ್ಕಳ ಯಕ್ಷ ಕಲಾ ಸಂಘದಿಂದ ಪರ್ಣಶಾ ತಿರುಮಲೇಶ್ವರ ಭಟ್ ನಿರ್ದೇಶನ, ಸ್ವಾತಿ ಸೂರಜ್ ನೆಲ್ಲಿತ್ತಾಯ ಸಂಯೋಜನೆಯಲ್ಲಿ ದಕ್ಷಯಜ್ಞ ಬಯಲಾಟ ಜರುಗಲಿದೆ.
19ರಂದು ಬೇಲ್ಗಗೆ ಕವಾಟೋದ್ಘಾಟನೆ, ಮಹಾಪೂಜೆ, ಸಂಜೆ ತೆಪ್ಪೋತ್ಸವ, ಕಟ್ಟೆಪೂಜೆ, ವಸಂತ ಕಟ್ಟೆಯಲ್ಲಿ ಓಕುಳಿ, ಮೀನಗುಂಡಿಯಲ್ಲಿ ಅವಭೃತೋತ್ಸವ, ಧ್ವಜಾವರೋಹಣ, 20ರಂದು ಶ್ರೀ ಶಿಶಿಲೇಶ್ವರ ದೇವರ ಮೂಲಸ್ಥಾನ ಕುಮಾರಗುಡ್ಡೆಯಲ್ಲಿ ರುದ್ರಾಭಿಷೇಕ, ಮಹಾಪೂಜೆ, ಕುಮಾರಾದಿ ದೈವಗಳಿಗೆ ನೇಮ, ರಾತ್ರಿ ಗೋಪುರದ ಬಾಗಿಲಿನಲ್ಲಿ ಚಕ್ರವರ್ತಿ ಕೊಡಮಣಿತ್ತಾಯ, ಪರಿವಾರ ದೈವಗಳಿಗೆ ನೇಮ, ವರ್ಷಾವಧಿ ಕಟ್ಟೆಯ ಬಳಿ ದೈವಗಳ ನೇಮ, 21ರಂದು ಬೆಳಗ್ಗೆ ಶುದ್ಧ ಕಲಶ ಸಂಪ್ರೋಕ್ಷಣೆ, ಮಹಾಪೂಜೆ ಜರುಗಲಿದೆ.
18ರಂದು ಮಹಾ ರಥೋತ್ಸವ
18ರಂದು ಬೆಳಗ್ಗೆ ಅಂಗಣೋತ್ಸವ, ರಾತ್ರಿ ಮಹಾರಥೋತ್ಸವ, ಕವಾಟಬಂಧನ, ಸಂಜೆ ವೈಕುಂಠಪುರ ಶಿಶಿಲ ಶ್ರೀ ದುರ್ಗಾಪರಮೇಶ್ವರಿ ಯುವಕ ಮಂಡಲ ಆಶ್ರಯದಲ್ಲಿ ಶ್ರೀ ಶಿಶಿಲೇಶ್ವರ ದೇವರ ಮಹಾರಥೋತ್ಸವ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 8ರಿಂದ 9ರವರೆಗೆ ಅರಸಿನಮಕ್ಕಿ ಶ್ರೀ ಲತೇಶ ಯಕ್ಷಗಾನ ಕಲಾ ಸಂಘದ ಕಲಾವಿದರಿಂದ ಲೋಕಾಭಿರಾಮ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.