ನಾಗರಹಾವು ಕಚ್ಚಿ ನಾಲ್ಕು ವರ್ಷದ ಬಾಲಕಿ ಸಾವು; ಕಬ್ಬು ಕಟಾವಿಗೆಂದು ಆಗಮಿಸಿದ್ದ ಪಾಲಕರ ಜತೆ ಬಂದಿದ್ದಾಗ ಅವಘಡ...

Sugar cane
Published on

ಧಾರವಾಡ: ಕೆಲಸಕ್ಕೆಂದು ತೆರಳಿದ್ದ ಅಪ್ಪ-ಅಮ್ಮನ ಜತೆ ಹೋಗಿದ್ದ ನಾಲ್ಕು ವರ್ಷದ ಬಾಲಕಿ ಮರಳಿ ಬಾರದ ಲೋಕಕ್ಕೆ ತೆರಳಿದ್ದಾಳೆ. ಅತ್ತ ತಂದೆ-ತಾಯಿ ಕಬ್ಬು ಕಟಾವು ಮಾಡುತ್ತಿದ್ದಾಗ ಇತ್ತ ಬಾಲಕಿಗೆ ನಾಗರಹಾವು ಕಚ್ಚಿದೆ.

ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕಿನ ಡೋರಿ ಗ್ರಾಮದಲ್ಲಿ ಈ ಅವಘಡ ಸಂಭವಿಸಿದೆ. ಅಳ್ನಾವರದ ಕೋಮಲ್ ಬರಡೆ (4) ಸಾವಿಗೀಡಾದ ಬಾಲಕಿ. ಬಾಲಕಿಯ ಅಪ್ಪ ಅಮ್ಮ ಮಹಾರಾಷ್ಟ್ರ ಮೂಲದವರಾಗಿದ್ದು, ಉದ್ಯೋಗ ಅರಸಿ ಕರ್ನಾಟಕಕ್ಕೆ ಬಂದು ಕಬ್ಬು ಕಟಾವು ಕೆಲಸ ಮಾಡುತ್ತಿದ್ದರು.

ತಂದೆ-ತಾಯಿ ಮಗಳನ್ನು ಪಕ್ಕದಲ್ಲೇ ಬಿಟ್ಟು ಕಬ್ಬು ಕಟಾವಿನಲ್ಲಿ ತೊಡಗಿದ್ದಾಗ ಅಲ್ಲಿಗೆ ಬಂದ ನಾಗರಹಾವು ಕಚ್ಚಿದ್ದು, ಬಾಲಕಿ ಮೃತಪಟ್ಟಿದ್ದಾಳೆ. ಅಳ್ನಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net