30 ಕೋಟಿ ರೂ.ವೆಚ್ಚದ ನೂತನ ಕಟ್ಟಡ ಶಂಕುಸ್ಥಾಪನೆ: ಬಿಐಟಿ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಹೇಳಿಕೆ

manthan
Published on

ಬೆಂಗಳೂರು: ರಾಜ್ಯದ ಅತ್ಯುತ್ತಮ ಕಾಲೇಜುಗಳಲ್ಲೊಂದಾದ ಬೆಂಗಳೂರು ತಾಂತ್ರಿಕ ಮಹಾವಿದ್ಯಾಲಯ(ಬಿಐಟಿ) ಕ್ಕೆ 30 ಕೋಟಿ ರೂ.ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಿಸಲು ಸದ್ಯದಲ್ಲೇ ಶಂಕುಸ್ಥಾಪನೆ ನೆರವೇರಿಸುವುದಾಗಿ ಬಿಐಟಿ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಅಶೋಕ್​ ಎಸ್​.ಡಿ. ಜಯರಾಮ್​ ಹೇಳಿದರು.

ಬಿಐಟಿ ವಾರ್ಷಿಕ ತಾಂತ್ರಿಕ ಮತ್ತು ಸಾಂಸ್ಕೃತಿಕ ಉತ್ಸವ ಮಂಥನ್​ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಕ್ರವಾರ ಮಾತನಾಡಿ,ರಾಜ್ಯದ ಮೊದಲ ಮೂರು ಇಂಜಿನಿಯರಿಂಗ್​ ಕಾಲೇಜುಗಳಲ್ಲಿ ಬಿಐಟಿಯೂ ಒಂದಾಗಿದೆ. ನ್ಯಾಕ್​ ಮಾನ್ಯತೆ ಪಡೆದುಕೊಂಡಿದೆ. ಬಿಐಟಿ ಹಳೆಯ ವಿದ್ಯಾರ್ಥಿಗಳ ಜಾಗತಿಕ ಸಮಾವೇಶವನ್ನು ಶ್ರೀವಾಗಿ ನಡೆಸಲಾಗುವುದು ಎಂದರು.

ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಎಂಬುದು ಸುಲಭವಾಗಿ ಸಿಗುವುದಿಲ್ಲ. ಯಾವುದೇ ಕ್ಷೇತ್ರವಾದರೂ ಏಳು-ಬೀಳು ಇರುತ್ತದೆ. ಯಶಸ್ಸು ಗಳಿಸಲು ಮುನ್ನುಗುವಾಗ ಎದುರಾಗುವ ಸವಾಲು ಮೆಟ್ಟಿ ನಿಲ್ಲುವ ಸಾಮರ್ಥ್ಯ ರೂಢಿಸಿಕೊಳ್ಳಬೇಕು. ಅಪಮಾನ ಸಹಿಸುವ ತಾಳ್ಮೆ ಇದ್ದರೆ ಮಾತ್ರ ಚಿತ್ರೋದ್ಯಮಕ್ಕೆ ಬರಬೇಕು. ಇಂಗ್ಲಿಷ್​ಗೆ ಹೆಚ್ಚು ಪ್ರಾಶಸ ಸಿಗುತ್ತಿರುವ ನಡುವೆಯೂ ಕನ್ನಡ ಭಾಷೆ ಉಳಿಸಿ ಬೆಳೆಸುವ ಪ್ರಯತ್ನವನ್ನು ನಾವೆಲ್ಲರೂ ಮಾಡಬೇಕೆಂದು ಚಿತ್ರನಟ ಶಿಶೀರ್​ ಶಾಸ್ತ್ರಿ ಹೇಳಿದರು. ವಿವಿಧ ಕಾಲೇಜುಗಳಿಂದ ಸಾವಿರಾರು ವಿದ್ಯಾರ್ಥಿಗಳು ಆಗಮಿಸಿದ್ದರು. ಸಂದ ಉಪಾಧ್ಯ ಡಾ.ಕೆ.ವಿ.ರೇಣುಕಾ ಪ್ರಸಾದ್​,ಎಲ್​.ಶ್ರೀನಿವಾಸ್​, ಪ್ರಧಾನ ಕಾರ್ಯದರ್ಶಿ ಟಿ.ಕೋನಪ್ಪರೆಡ್ಡಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಡಾ.ಡಿ.ಕೆ. ರಮೇಶ್​, ವೆಂಕಟರಾಮೇಗೌಡ, ಡಾ.ಟಿ.ಎಚ್​. ಆಂಜನಪ್ಪ, ಡಾ.ವಿ.ನಾರಾಯಣಸ್ವಾಮಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಿ ಹೊರತರಲು ಮಂಥನ್​ ಕಾರ್ಯಕ್ರಮ ಸಹಕಾರಿ. ಸಾಂಸತಿಕ ಸ್ಪರ್ಧೆಯಲ್ಲಿ ಬಹುಮಾನ ಸಿಗದವರು ನಿರಾಶರಾಗಬಾರದು.ಬಿಐಟಿ ಕಾಲೇಜು ಪ್ರಾಧ್ಯಾಪಕರ ಬೇಡಿಕೆ ಈಡೇರಿಸಿ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು.

|ಬಿ.ಕೆಂಚಪ್ಪಗೌಡ, ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net