ಬಿಜೆಪಿ v/s ಕಾಂಗ್ರೆಸ್​​: ಸುದ್ದಿಗೋಷ್ಠಿಯಲ್ಲೇ ಧಿಕ್ಕಾರ ಕೂಗಿದ ಮಾಜಿ ಡಿಸಿಎಂ

gp
Published on

ತುಮಕೂರು: ನಗರದಲ್ಲಿ ಯುವ ಕಾಂಗ್ರೆಸ್ ಪ್ರತಿಭಟನೆ ವಿರೋಧಿಸಿ ಕೈಗೊಂಡಿದ್ದ ಬಿಜೆಪಿ ಪ್ರತಿಭಟನಾ ಮೆರವಣಿಗೆಯು ಕಾಂಗ್ರೆಸ್ ಕಚೇರಿ ಮುಂದೆ ತೆರುಳುವ ಸಂದರ್ಭದಲ್ಲಿ ಕಾಂಗ್ರೆಸ್ ಸುದ್ದಿಗೋಷ್ಠಿ ನಡೆಸುತ್ತಿದ್ದ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಮೈಕ್​ನಲ್ಲೇ ಬಿಜೆಪಿಗೆ ಧಿಕ್ಕಾರ ಕೂಗಿದ ಪ್ರಸಂಗ ನಡೆದಿದೆ.

ಪ್ರಿಯಾಂಕ ಗಾಂಧಿ ಬಂಧನ ವಿರೋಧಿಸಿ ಸೋಮವಾರ ಸಂಜೆ ತುಮಕೂರಿನಲ್ಲಿ ಪ್ರತಿಭಟನೆ ನಡೆಸಿದ್ದ ಯುವ ಕಾಂಗ್ರೆಸ್ ಪದಾಧಿಕಾರಿಗಳು ಕೇಸರಿ ಬಟ್ಟೆಯನ್ನು ಪ್ರತಿಕೃತಿಗೆ ಹೊದಿಸಿದ್ದರು. ಈ ಕೃತ್ಯವನ್ನು ಖಂಡಿಸಿ ಬಿಜೆಪಿ ಎಸ್ಸಿ ಮೋರ್ಚಾ ವತಿಯಿಂದ ಬುಧವಾರ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.

ಇದೇ ವೇಳೆ ಕಾಂಗ್ರೆಸ್ ಕಚೇರಿಯಲ್ಲಿ ಜಿ.ಪರಮೇಶ್ವರ್ ಮತ್ತು ಟಿ.ಬಿ.ಜಯಚಂದ್ರ ಸುದ್ದಿಗೋಷ್ಠಿ ನಡೆಸುತ್ತಿದ್ದರು. ಬಿಜೆಪಿ ಕಾರ್ಯಕರ್ತರ ಧಿಕ್ಕಾರ ಘೋಷಣೆಗಳಿಗೆ ಕೆರಳಿದ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಯಾಗಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗಿದರು. ಇದಕ್ಕೆ ದನಿಗೂಡಿಸಿದ ಜಿ.ಪರಮೇಶ್ವರ್ ಮೈಕ್​​ನಲ್ಲಿ ಬಿಜೆಪಿ ವಿರುದ್ಧ ಧಿಕ್ಕಾರ ಕೂಗಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net