

ಬೆಂಗಳೂರು: ಮೇಕೆದಾಟು ಯೋಜನೆ ಪ್ರಾರಂಭಿಸಲು ರಾಜ್ಯ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿರುವ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಒಂದು ತಿಂಗಳೊಳಗೆ ಮೇಕೆದಾಟು ಯೋಜನೆ ಕೆಲಸ ಆರಂಭಿಸಿ ಬೆಂಗಳೂರಿಗೆ ನೀರು ಕೊಡಬೇಕು ಎಂದು ಬೊಮ್ಮಾಯಿ ಸರ್ಕಾರಕ್ಕೆ ಗಡುವು ನೀಡಿದ್ದಾರೆ.
ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಡಿಕೆಶಿ, "ಮೇಕೆದಾಟು ಯೋಜನೆ ಮಾಡ್ತೇವೆ ಅಂದ್ರಿ, ಒಳ್ಳೆಯದು. ಮಹದಾಯಿ ಯೋಜನೆ ಮೊದಲಿಗೆ ತನ್ನಿ. ಕೆಲಸ ಮಾಡೋಕೆ ವಿಳಂಬವೇಕೆ? ಮೇಕೆದಾಟು ಯೋಜನೆಗೆ ಕಾರ್ಯಕ್ರಮ ರೂಪಿಸಿ. ಏಕೆ ಇನ್ನೂ ಯೋಜನೆ ಪ್ರಾರಂಭಿಸುತ್ತಿಲ್ಲ?" ಎಂದು ಸಿಎಂ ಬೊಮ್ಮಾಯಿಗೆ ಪ್ರಶ್ನೆ ಹಾಕಿದರು. "ನಿಮಗೆ ಒಂದು ತಿಂಗಳ ಗಡುವು ಕೊಡ್ತೇವೆ. ಅಷ್ಟರೊಳಗೆ ಯೋಜನೆ ಪ್ರಾರಂಭಿಸಿ, ಬೆಂಗಳೂರಿಗೆ ಕುಡಿಯುವ ನೀರು ಕೊಡಿ" ಎಂದು ಅವರು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.