

ಪುತ್ತೂರು ಗ್ರಾಮಾಂತರ: ನರಿಮೊಗರಿನಲ್ಲಿರುವ ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆ ಆಹಾರ ಮತ್ತು ಆರೋಗ್ಯ ಎಂಬ ಶೀರ್ಷಿಕೆಯ ಅಡಿಯಲ್ಲಿ ‘ನಾವು ದಿನ ನಿತ್ಯ ಬಳಸುವ ಆಹಾರಗಳಲ್ಲಿ ಆರೋಗ್ಯಕ್ಕೆ ಪೂರಕವಾದವುಗಳು ಮತ್ತು ಮಾರಕವಾದವುಗಳು ಯಾವುವು ಮತ್ತು ಆರೋಗ್ಯ ರಕ್ಷಣೆಗೆ ನಮ್ಮ ದಿನ ನಿತ್ಯದ ಆಹಾರ ಕ್ರಮ ಹೇಗಿರಬೇಕು’ ಎಂಬ ವಿಚಾರವಾಗಿ ಉಚಿತ ಜಾಗೃತಿ ಕಾರ್ಯಕ್ರಮ ಆಯೋಜಿಸಿದೆ.
ಅರೋಗ್ಯ ಪ್ರಸಾದಿನೀ ಸರಣಿ ಆರೋಗ್ಯ ಮಾಹಿತಿ ಕಾರ್ಯಾಗಾರದ ಪ್ರಥಮ ಕಾರ್ಯಕ್ರಮ ಜೂ.9ರಂದು ಅಪರಾಹ್ನ 3 ಗಂಟೆಗೆ ನರಿಮೊಗರು ಗ್ರಾಮ ಪಂಚಾಯಿತಿ ಸಮೀಪ ರಾಜ್ಯ ಹೆದ್ದಾರಿ ಪಕ್ಕದಲ್ಲಿರುವ ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯ ಯೋಗ ಸಭಾಂಗಣದಲ್ಲಿ ನಡೆಯಲಿದೆ. ‘ಸಂಸ್ಕರಿಸಿದ ಆಹಾರ ಮತ್ತು ನಮ್ಮ ಅರೋಗ್ಯ’ ಎಂಬ ವಿಷಯದ ಕುರಿತು ಆಯುರ್ವೇದ ತಜ್ಞ ವೈದ್ಯ ಹಾಗೂ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಮಾಹಿತಿ ನೀಡುವರು. ನಿವೃತ್ತ ಪ್ರಾಂಶುಪಾಲ ಎನ್.ದುಗ್ಗಪ್ಪ ಅಧ್ಯಕ್ಷತೆ ವಹಿಸುವರು.