

ವಿಜಯವಾಣಿ ಸುದ್ದಿಜಾಲ ಬಂಟ್ವಾಳ
ನಿಕ್ಷಯ್ ಮಿತ್ರ ಕಾರ್ಯಕ್ರಮದ ಮೂಲಕ ಕ್ಷಯ ರೋಗಿಗಳ ಸಂಖ್ಯೆ ಇಳಿಕೆ ಸಾಧ್ಯ.ಇಂತಹ ಕಾರ್ಯಕ್ರಮ ಆಯೋಜಿಸುವ ಪರಿಸ್ಥಿತಿ ಎದುರಾಗದಿರಲಿ ಎಂದು ಸ್ವರ್ಣೋದ್ಯಮಿ ನಾಗೇಂದ್ರ ವಿ.ಬಾಳಿಗ ಹೇಳಿದರು.
ಕ್ಷಯ ಮುಕ್ತ ಭಾರತ ನಿರ್ಮಾಣದ ಪ್ರಯುಕ್ತ ಕೇಂದ್ರ ಸರ್ಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಬುಧವಾರ ಸೇವಾಂಜಲಿ ಪ್ರತಿಷ್ಠಾನದ ಆಶ್ರಯದಲ್ಲಿ ಕ್ಷಯ ರೋಗಿಗಳಿಗೆ ದವಸ ಧಾನ್ಯದ ಕಿಟ್ ವಿತರಿಸಿ ಮಾತನಾಡಿದರು.
ಮುಖ್ಯ ಅತಿಥಿ ಮಂಚಿ ಗ್ರಾ.ಪಂ. ಮಾಜಿ ಅಧ್ಯಕ್ಷ ಉಮ್ಮರ್ ಮಂಚಿ ಮಾತನಾಡಿ, ಕೃಷ್ಣಕುಮಾರ್ ಪೂಂಜ ನೇತೃತ್ವದಲ್ಲಿ ಸೇವಾಂಜಲಿ ಸಂಸ್ಥೆ ಬಡವರ ಕಣ್ಣೊರೆಸುವ ಕೆಲಸ ನಿರಂತರ ಮಾಡುತ್ತಾ ಬಂದಿದೆ. ಜನರ ಸೇವೆ ಮಾಡುವ ಅವಕಾಶವನ್ನು ದೇವರು ಅವರಿಗೆ ಕರುಣಿಸಿದ್ದು ಸೇವಾ ಕ್ಷೇತ್ರದಲ್ಲಿ ಅವರ ಸಾಧನೆ ಶ್ಲಾಘನೀಯ ಎಂದು ತಿಳಿಸಿದರು.
ಸೇವಾಂಜಲಿ ಪ್ರತಿಷ್ಠಾನದ ಅಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ ಪ್ರಸ್ತಾವನೆಗೈದರು. ಬಿ.ಸಿ.ರೋಡಿನ ದಾಸ್ತಾವೇಜು ಬರಹಗಾರ ಟಿ.ಗಣೇಶ್ ರಾವ್, ಟ್ರಸ್ಟಿಗಳಾದ ತಾರನಾಥ ಕೊಟ್ಟಾರಿ, ಭಾಸ್ಕರ ಚೌಟ, ಆನಂದ ಆಳ್ವ ಗರೋಡಿ, ಸುರೇಶ್ ರೈ ಪೆಲಪಾಡಿ, ಪ್ರಕಾಶ್ ಕೆ. ಫರಂಗಿಪೇಟೆ, ಕೃಷ್ಣ ತುಪ್ಪೆಕಲ್ಲು, ನಾರಾಯಣ ಬಡ್ಡೂರು, ಉಮೇಶ್ ಸೇಮಿತ, ರಾಜೇಶ್ ಕಬೇಲ, ಪ್ರಶಾಂತ್ ತುಂಬೆ, ವಿಕ್ರಂ ಬರ್ಕೆ, ಕೇಶವ, ಉಮಾ ಚಂದ್ರಶೇಖರ ಇದ್ದರು. ಟ್ರಸ್ಟಿ ಕೊಡ್ಮಾಣ್ ದೇವದಾಸ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.