ಗಂಗೊಳ್ಳಿಗೆ ಮೀನುಗಾರಿಕಾ ಅಧಿಕಾರಿ ಭೇಟಿ

gan-6
Published on

ಗಂಗೊಳ್ಳಿ: ರಾಜ್ಯ ಮೀನುಗಾರಿಕೆ ಇಲಾಖೆ ನಿರ್ದೇಶಕ ದಿನೇಶ ಕುಮಾರ್ ಕಳ್ಳೇರ್ ಅವರು ಗಂಗೊಳ್ಳಿ ಮೀನುಗಾರಿಕೆ ಬಂದರಿಗೆ ಭಾನುವಾರ ಭೇಟಿ ನೀಡಿ ಜೆಟ್ಟಿ ಪುನಃ ನಿರ್ಮಾಣ ಕಾಮಗಾರಿ ಪರಿಶೀಲಿಸಿದರು.

ಮೂರು ವರ್ಷಗಳ ಹಿಂದೆ ಕುಸಿತಕ್ಕೊಳಗಾದ ಜೆಟ್ಟಿ ಪುನಃ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿರುವ ಬಗ್ಗೆ ಹಾಗೂ ಕಾಮಗಾರಿಯಲ್ಲಿ ಲೋಪದೋಷಗಳ ಬಗ್ಗೆ ಬಂದರು ಮತ್ತು ಮೀನುಗಾರಿಕೆ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಅವರು, ಸುಸಜ್ಜಿತ ಜೆಟ್ಟಿ ನಿರ್ಮಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿ ಸೂಚನೆಗಳನ್ನು ನೀಡಿದರು.

ಉಡುಪಿ ಬಂದರು ಮತ್ತು ಮೀನುಗಾರಿಕೆ ಇಲಾಖೆ ಎಕ್ಸಿಕ್ಯೂಟಿವ್ ಇಂಜಿನಿಯರ್ ಪ್ರಸನ್ನ ಶೇಟ್, ಗಂಗೊಳ್ಳಿ ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಸಂಜೀವ ಅರಕೇರಿ, ಉಡುಪಿ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ದಿವಾಕರ ಖಾರ್ವಿ, ಸಿಐಸಿಎಫ್‌ನ ಬೆಳ್ಳಿಯಪ್ಪ, ಜ್ಯೂನಿಯರ್ ಇಂಜಿನಿಯರ್ ಭಾನುಪ್ರಕಾಶ್, ಗಂಗೊಳ್ಳಿ ಮೀನುಗಾರಿಕೆ ಇಲಾಖೆಯ ಗೋಪಾಲಕೃಷ್ಣ, ಗುತ್ತಿಗೆದಾರರು ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net