ಉಡುಪಿ ಜಿಲ್ಲೆಯ ಜನರು ಸಂಸ್ಕಾರವಂತರು

kota-5
Published on

ಕೋಟ: ಬಳ್ಳಾರಿಯವಳಾದರೂ ನನ್ನನ್ನು ಉಡುಪಿ ಮನೆಮಗಳಾಗಿ ಕಾಣುತ್ತಿದ್ದಾರೆ. ಜಿಲ್ಲೆಯ ಜನರು ಸಂಸ್ಕಾರವಂತರು ಎಂದು ಪದ್ಮಶ್ರೀ ಪುರಸ್ಕೃತೆ ಡಾ.ಬಿ.ಮಂಜಮ್ಮಾ ಜೋಗತಿ ಹೇಳಿದರು.

ಶನಿವಾರ ಕೋಡಿ ಕನ್ಯಾಣದ ಶ್ರೀರಾಮ ಮಂದಿರ ವಠಾರದಲ್ಲಿ ಶ್ರೀ ರಾಮ ಗೆಳೆಯರ ಬಳಗ ಆಶ್ರಯದಲ್ಲಿ ಆಯೋಜಿಸಿದ್ದ ತೃತೀಯ ವರ್ಷದ ಶ್ರೀ ರಾಮ ಪರ್ವ-2025 ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ ಕಾರ್ಯಕ್ರಮ ಉದ್ಘಾಟಿಸುವುದರೊಂದಿಗೆ ಪ್ರಶಸ್ತಿ ಪ್ರದಾನಿಸಿದರು. ಶ್ರೀ ರಾಮ ಗೆಳೆಯರ ಬಳಗ ಅಧ್ಯಕ್ಷ ಪುನಿತ್ ಪೂಜಾರಿ ಅಧ್ಯಕ್ಷತೆ ವಹಿಸಿದರು. ಮುಖ್ಯ ಅಭ್ಯಾಗತರಾಗಿ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಉದ್ಯಮಿ ಸುಗ್ಗಿ ಸುಧಾಕರ ಶೆಟ್ಟಿ, ಜ್ಯೋತಿ ಉದಯ ಕುಮಾರ್, ವಿಜಯ ನಾಯಿರಿ, ಜಗನಾಥ ಅಮೀನ್, ಪ್ರಜ್ವಲ್ ಶೆಟ್ಟಿ, ಗೀತಾ ಕಾರ್ವಿ, ಶಂಕರ್ ಕುಂದರ್, ಪಿಡಿಒ ಹರೀಶ್‌ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ರಾಮಪರ್ವ ಅಂಗವಾಗಿ 150 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ರಕ್ತದಾನ ಶಿಬಿರ ಆಯೋಜಿಸಲಾಯಿತು. ನಿಖೀಲ್ ಕರ್ಕೇರ ಸ್ವಾಗತಿಸಿದರು. ಅಕ್ಷಿತ್ ಪೂಜಾರಿ ವಂದಿಸಿದರು. ಮಂಜುನಾಥ ಹಿಲಿಯಾಣ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net