ಕಸದಿಂದ ಸಿಎನ್‌ಜಿ ಉತ್ಪಾದನೆ ರಾಜ್ಯದಲ್ಲೇ ಮೊದಲು

Ptr_CNG Production
Published on

ಪುತ್ತೂರು; ನಗರ ವ್ಯಾಪ್ತಿಯಲ್ಲಿ ಕಸ ಸಂಗ್ರಹಿಸಿ ಅದರಿಂದ ಸಿಎನ್‌ಜಿ ಉತ್ಪಾದನೆ ಮಾಡುವ ಕಾರ್ಯ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಪುತ್ತೂರಿನಲ್ಲಿ ನಡೆಯಲಿದೆ. ಬನ್ನೂರಿನ ಡಂಪಿಂಗ್ ಯಾರ್ಡಿನಲ್ಲಿ ನಿರ್ಮಾಣ ಮಾಡಿದ ಘಟಕ ಕೆಲವೇ ದಿನದಲ್ಲಿ ಕಾರ್ಯಾಚರಿಸಲಿದೆ. ಪ್ರಸ್ತುತ ಈ ಗ್ಯಾಸ್ ಉತ್ಪಾದನೆಯ ಕಾರ್ಯ ಪರೀಕ್ಷಾ ಹಂತದಲ್ಲಿದೆ. ಮುಂದೆ ನಗರಸಭೆಯ ಈ ಎರಡು ವಾಹನಗಳಿಗೆ ಇದೇ ಗ್ಯಾಸ್ ಬಳಕೆ ಮಾಡಲಾಗುವುದು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ನಗರಸಭಾ ಆವರಣದಲ್ಲಿ ಸ್ವಚ್ಛಭಾರತ್ ಯೋಜನೆಯಡಿಯಲ್ಲಿ ಖರೀದಿಸಲಾದ 18 ಲಕ್ಷ ರೂ. ವೆಚ್ಚದ ಸಿಎನ್‌ಜಿ ವಾಹನಗಳಿಗೆ ಹಸಿರು ನಿಶಾನೆ ತೋರಿಸಿ ಮಾತನಾಡಿದರು.

ಕಸ ವಿಲೇವಾರಿ ಎನ್ನುವುದು ‘ಚಾಲೆಂಜಿಂಗ್ ಜಾಬ್’ ಆಗಿದೆ. ನಗರಸಭೆಯ ವ್ಯಾಪ್ತಿಯಲ್ಲಿ ಕಸ ವಿಲೇವಾರಿಗೆ ಈಗಾಗಲೇ 18 ವಾಹನಗಳನ್ನು ಬಳಕೆ ಮಾಡಲಾಗುತ್ತಿದ್ದು, ಸಿಎನ್‌ಜಿ ಗ್ಯಾಸ್ ಬಳಕೆಯ ಎರಡು ನೂತನ ವಾಹನಗಳನ್ನು ಖರೀದಿ ಮಾಡಲಾಗಿದೆ. ಈ ಎಲ್ಲ ವಾಹನಗಳನ್ನು ಬಳಕೆ ಮಾಡಿಕೊಳ್ಳುವ ಮೂಲಕ ನಗರದ ಸ್ವಚ್ಛತೆಯನ್ನು ಕಾಪಾಡುವ ಕೆಲಸ ಪರಿಣಾಮಕಾರಿಯಾಗಿ ನಡೆಯಬೇಕು. ಘಟಕದಲ್ಲಿ ಉತ್ಪತ್ತಿ ಮಾಡಲಾದ ಗ್ಯಾಸ್ ಮುಕ್ತಮಾರುಕಟ್ಟೆ ದರದಲ್ಲಿ ಮಾರಾಟ ಮಾಡಲಾಗುವುದು ಎಂದು ತಿಳಿಸಿದರು.

ಪೌರಾಯುಕ್ತ ಮಧು ಎಸ್. ಮನೋಹರ್, ನಗರಸಭಾ ಸದಸ್ಯರಾದ ಬಾಲಚಂದ್ರ ಕರಿಯಾಲ, ಮಹಮ್ಮದ್ ರಿಯಾಝ್ ಪರ್ಲಡ್ಕ, ಶೈಲಾ ಪೈ ಮೊಟ್ಟೆತ್ತಡ್ಕ, ರಾಬಿನ್ ತಾವ್ರೋ ಸಾಲ್ಮರ, ದಿನೇಶ್ ಶೇವಿರೆ, ಅಧಿಕಾರಿಗಳಾದ ಶಬರೀನಾಥ್, ರಾಮಚಂದ್ರ, ಶ್ವೇತಾ ಕಿರಣ್, ಜಯಲಕ್ಷ್ಮಿ ಬೇಕಲ್ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net